ಅಂಜೂರದ ಹಣ್ಣಿನ ಬಗ್ಗೆ ನಿಮಗೆಷ್ಟು ಗೊತ್ತು? ಈ ಹಣ್ಣಿನ ಸಖತ್ ಲಾಭಗಳ ಬಗ್ಗೆ ಓದಿ…ಶಾಕ್ ಆಗ್ತೀರಾ …!!!

 ಅಂಜೂರದ ಹಣ್ಣು ನಮ್ಮ ಕರ್ನಾಟಕದಲ್ಲಿ ತುಂಬಾ ಫೇಮಸ್ ಅಲ್ಲದಿದ್ದರೂ ಪರಿಚಯದ ಅಗತ್ಯವೇನಿಲ್ಲ. ಹಳ್ಳಿಗಳಲ್ಲಿ ಈಗಲೂ ಪ್ರಸಿದ್ಧ ಈ ಹಣ್ಣು. ಈ ಹಣ್ಣು ನಮ್ಮ ದೇಹಕ್ಕೆ ಬಹಳ ಉಪಕಾರಿ. ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಹಲವು ಉಪಯೋಗಗಳಿವೆ.

 

 ಅಂಜೂರದ ಹಣ್ಣು ಪೌಷ್ಟಿಕವಾದ, ಆರೋಗ್ಯಕರ ಹಣ್ಣು. ಇದರಲ್ಲಿ ವಿಟಮಿನ್ A, B, C, D ಕಂಡು ಬರುತ್ತವೆ. ಖನಿಜಾಂಶ, ಸಕ್ಕರೆ ಕೂಡ ಒಳಗೊಂಡಿದ್ದು ಪುಷ್ಟಿಕರವಾಗಿದೆ. ಇದರ ಕಾಯಿಗಳನ್ನು ಮಾಂಸ ಕುದಿಸುವಾಗ ಬೇಗ ಕುದಿಯಲು ಬಳಸುತ್ತಾರೆ.

 

 ಕಬ್ಬಿಣ, ತಾಮ್ರದ ಅಂಶಗಳು ಈ ಹಣ್ಣಿನಲ್ಲಿ ಹೆಚ್ಚಾಗಿವೆ. ಸತುವಿನ ಅಂಶವೂ ಕಂಡು ಬರುತ್ತದೆ. A, C ವಿಟಮಿನ್ ಅಂಶ ಜಾಸ್ತಿಯಿದ್ದೂ, B, D ವಿಟಮಿನ್ ಕಡಿಮೆ ಪ್ರಮಾಣದಲ್ಲಿರುತ್ತದೆ. ಸಿಟ್ರಿಕ್, ಆಸಿಟಿಕ್ ಆಸಿಡ್’ಗಳೂ ಇರುತ್ತವೆ.

 

ಇದು ಔಷಧೀಯ ಸಸ್ಯವೂ ಹೌದು. ಮಲಬದ್ಧತೆ ನಿವಾರಣೆ, ಸರಳ ಮೂತ್ರ ವಿಸರ್ಜನೆಗೆ ಸಹಕಾರಿ. ರಕ್ತ ಹೀನತೆ ತಡೆದು ಹೆಚ್ಚಿನ ರಕ್ತ ಹುಟ್ಟಿಸುತ್ತದೆ. ದನ-ಕರುಗಳಿಗೂ ಇಷ್ಟ ಈ ಹಣ್ಣು.

 

 ಇದರ ಹಾಲನ್ನು ಗಿಣ್ಣ ತಯಾರಿಕೆಯಲ್ಲಿ ಬಳಸುತ್ತಾರೆ. ಕರುಳಿನಲ್ಲಿ ಹುಳುಗಳಿದ್ದರೆ ತಕ್ಷಣ ಉಪಶಮನಕ್ಕಾಗಿ ಇದು ಉಪಯುಕ್ತ. ಗಾಯವಾದ ಜಾಗಕ್ಕೆ ಕೀವು ಕಾಣಿಸಿಕೊಳ್ಳದಂತೆ ಇರಲು ಈ ಹಣ್ಣಿನ ಪೇಸ್ಟ್’ನ್ನು ಕಟ್ಟುತ್ತಾರೆ.

 

ನಮ್ಮ ಸುತ್ತ ಮುತ್ತಲು ಸಿಗುವ ಅಂಜೂರದ ಹಣ್ಣಿನ ಲಾಭಗಳ ಬಗ್ಗೆ ನಿಮ್ಮವರಿಗೂ ತಿಳಿಸಲು ಈ ಲೇಖನವನ್ನು ಶೇರ್ ಮಾಡಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional