ನೀವು ಗರ್ಭ ಧರಿಸಿದ್ದೀರಾ? ಯಾವ ಆಹಾರ ತಿನ್ನಬೇಕು, ಯಾವುದು ತಿನ್ನಬಾರದೆಂಬ ಗೊಂದಲ ನಿಮ್ಮನ್ನು ‌ಕಾಡುತ್ತಿದೆಯಾ? ಹಾಗಿದ್ದರೆ ಇಲ್ಲಿ ನೋಡಿ

ಗರ್ಭ ಧರಿಸಿದ ಕೂಡಲೇ ಮೊದಲು ಎದುರಾಗುವ ಸಮಸ್ಯೆಯೇ ಇದು, ಯಾವ ಆಹಾರ ತೆಗೆದುಕೊಳ್ಳಬೇಕು,ಯಾವುದು ತೆಗೆದುಕೊಳ್ಳಬಾರದೆಂದು, ಚಿಂತೆ ಬಿಡಿ ಇದನ್ನು ಓದಿ, ಪಾಲಿಸಿ.
ಪೇರಲೆ ಹಣ್ಣು- ಪೇರಲೆಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಇರುವುದರಿಂದ ಗರ್ಭಿಣಿಯರು ತಿನ್ನಲು ಸೂಕ್ತವಾದ ಹಣ್ಣು ಇದು. ಪೇರಲೆಯಲ್ಲಿ ವಿಟಮಿನ್ ಸಿ’ ಯು ಇರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಮಗು ಚೆನ್ನಾಗಿ ಬೆಳೆಯಲು ಸಹಕಾರಿ
ಟೊಮ್ಯಾಟೊ- ಟೊಮ್ಯಾಟೊವನ್ನು ಗರ್ಭ ಧರಿಸಿದ ಮಹಿಳೆಯರು ತಿನ್ನುವುದು ಸೂಕ್ತ, ಗರ್ಭಿಣಿಯಾಗಿದ್ದಾಗ ಇವುಗಳನ್ನು ಸೇವಿಸುವುದರೆ ಅದು ಮಗುವಿನ ಜನನದ ನಂತರ ಮಗುವಿನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮುಂದಿನ ದಿನಗಳಲ್ಲಿಯೂ ಮಗುವಿನ ಆರೋಗ್ಯ ಚೆನ್ನಾಗಿ ಇರುತ್ತದೆ
ಬಾರ್ಲಿ- ಬಾರ್ಲಿಯಲ್ಲಿ ಉತ್ತಮ ಪ್ರಮಾಣದ ಕಾರ್ಬೋಹೈಡ್ರೇಟ್ ಗಳು ಇರುವುದರಿಂದ ಗರ್ಭಿಣಿಯ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತದೆ, ಅಲ್ಲದೇ ಮಗುವಿನ ಬೆಳವಣಿಗೆಗೂ ಸಹಕಾರಿ.
ಮೊಟ್ಟೆ- ಮೊಟ್ಟೆಯಲ್ಲಿ ಅತಿ ಹೆಚ್ಚಿನ ಪ್ರೋಟೀನ್ ಅಂಶ ಇರುವ ಕಾರಣ ಮಗುವಿನ ದೇಹದಲ್ಲಿ ಮೂಳೆ ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಕಾರಿಯಾಗಿದೆ, ಆದ್ದರಿಂದ ಗರ್ಭಿಣಿಯರು ವಾರದಲ್ಲಿ 2 ದಿನ ಮೊಟ್ಟೆ ಸೇವಿಸುವುದು ಉತ್ತಮ.
ಬಾದಾಮಿ- ಬಾದಾಮಿಯಲ್ಲಿ ಉತ್ತಮ ಪ್ರಮಾಣದ ‌ವಿಟಮಿನ್ ಮತ್ತು ಪ್ರೋಟೀನ್ ಗಳಿರುವುದರಿಂದ ಮಗುವಿನ ಮೂಳೆಗಳ ಬೆಳವಣಿಗೆಗೆ ಸಹಾಯಕಾರಿಯಾಗಿದೆ, ಆದ್ದರಿಂದ ಗರ್ಭಿಣಿಯರು ಬಾದಾಮಿಯನ್ನು ತಿನ್ನುವುದು ಒಳ್ಳೆಯದು
ಹಸಿರು ಸೊಪ್ಪುಗಳು- ಸೊಪ್ಪುಗಳಲ್ಲಿ ನಾರಿನಂಶ ಮತ್ತು ವಿಟಮಿನ್ ಗಳು ಹೇರಳವಾಗಿ ದೊರಕುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೇ ಸೇವಿಸುವುದು ಒಳಿತು, ಸಬ್ಬಸಿಗೆ ಸೊಪ್ಪನ್ನು ಗರ್ಭಿಣಿಯರು ತಿನ್ನುವುದರಿಂದ ಮುಂದೆ ಮಗುವಿಗೆ ಎದೆಹಾಲು ಸಮ್ರಧ್ದವಾಗಿ ಸಿಗುತ್ತದೆ. ಒಂದೆಲಗ ಸೊಪ್ಪನ್ನು ಬೀಸಿ ಹಾಲಿನೊಂದಿಗೆ ಸೇರಿಸಿ ನಿತ್ಯವೂ ಕುಡಿದರೆ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಾಯಕಾರಿಯಾಗಿದೆ, ಹುಟ್ಟಿದ ನಂತರವೂ ನೆನಪಿನ ಶಕ್ತಿ ಚೆನ್ನಾಗಿರುತ್ತದೆ
ಪುದಿನ ಸೊಪ್ಪು, ಪಾಲಾಕ್ ಸೊಪ್ಪು ಎಲ್ಲವೂ ಗರ್ಭಿಣಿಯರ ಆರೋಗ್ಯಕ್ಕೆ ತುಂಬಾ ಒಳ್ಳೆಯದು
ಸೇಬು ಹಣ್ಣು- ಗರ್ಭಿಣಿಯರು ಸೇಬು ಹಣ್ಣನ್ನು ಪ್ರತಿನಿತ್ಯವೂ ಸೇವಿಸುವುದು ಉತ್ತಮ, ಸೇಬುಹಣ್ಣಿನ ಸಿಪ್ಪೆಯಲ್ಲಿರುವ ನಾರುಗಳು ಮಗುವಿನ ಆರೋಗ್ಯಕ್ಕೆ ಒಳ್ಳೆಯದು, ಇದು ಗರ್ಭಿಣಿಯರಿಗೆ ಮಲಬದ್ದತೆಯಾಗದಂತೆ ನೋಡಿಕೊಳ್ಳುತ್ತದೆ
ಹಾಲು- ಹಾಲಿನಲ್ಲಿ ಹೆಚ್ಚಿನ ಪ್ರಮಾಣದ ಖನಿಜ ಮತ್ತು ಕ್ಯಾಲ್ಸಿಯಂ ಇರುವುದರಿಂದ ಗರ್ಭಿಣಿಯರು ಪ್ರತಿನಿತ್ಯ ಹಾಲು ಕುಡಿಯಲೇ ಬೇಕು, ಹಾಲಿನ ಜೊತೆ ಸ್ವಲ್ಪ ಜೇನು ಬೆರೆಸಿ ಕುಡಿಯುವುದರಿಂದ ಆರೋಗ್ಯ ಚೆನ್ನಾಗಿ ಇರುತ್ತದೆ, 6 ತಿಂಗಳ ನಂತರ ಹಾಲಿನ ಜೊತೆ ಸ್ವಲ್ಪವೇ ಸ್ವಲ್ಪ ಕೇಸರಿ ಬೆರೆಸಿ ಕುಡಿಯುವುದರಿಂದ ಹುಟ್ಟುವ ಮಗುವು ಹಾಲಿನ ಬಣ್ಣದಲ್ಲಿರುತ್ತದೆ
ಸೀತಾಫಲ- ಸೀತಾಫಲವು ಖನಿಜಗಳು, ವಿಟಮಿನ್ ಪ್ರೋಟೀನ್, ಶರ್ಕರ ಪಿಷ್ಟವನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವುದರಿಂದ ಈ ಹಣ್ಣು ಗರ್ಭಿಣಿಯರ ಪಾಲಿನ ಸಂಜೀವಿನಿಯಾಗಿದೆ
ಹಸಿ ತರಕಾರಿ- ಕ್ಯಾರೆಟ್, ನವಿಲು ಕೋಸು, ಬೀಟ್ರೂಟ್, ಮೂಲಂಗಿ, ಈರುಳ್ಳಿ, ಟೊಮ್ಯಾಟೊಗಳ ಪೀಸುಗಳನ್ನು ಪ್ರತಿನಿತ್ಯ ಸೇವಿಸುವುದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿ
ಗರ್ಭಿಣಿಯರ ಆಹಾರ ಪದ್ದತಿಯನ್ನು ತಿಳಿದುಕೊಂಡಿರಲ್ಲಾ, ಎಲ್ಲರಿಗೂ ಶೇರ್ ಮಾಡಿ, ಗರ್ಭಿಣಿಯರು ಯಾವ ಆಹಾರ ಬಳಸಬೇಕೆಂಬುದನ್ನು ತಿಳಿಸಿ

Please follow and like us:
0
leave a comment

Leave a Reply

Your email address will not be published. Required fields are marked *

Devotional