ನಿಮಗೆ ಹಿಮ್ಮಡಿ ಒಡೆಯುತ್ತದೆಯಾ? ಹಾಗಿದ್ರೆ ಇದನ್ನು ಓದಿ,

ಚಳಿಗಾಲ ಬಂತೆಂದರೆ ಸಾಕು, ಚಳಿಯ ಜೊತೆ ಚರ್ಮದ ರಗಳೆಯೂ ಜೊತೆಯಾಗುತ್ತದೆ. ತುಟಿ ಒಡೆಯುವುದು, ಮುಖದಲ್ಲೆಲ್ಲ ಕಲೆಗಳು, ಎಲ್ಲಕ್ಕಿಂತ ಮುಖ್ಯವಾಗಿ ಹಿಮ್ಮಡಿ ಒಡೆಯುವುದು. ಹಿಮ್ಮಡಿ ಒಡೆಯುವುದರಿಂದ ನೋಡಲು ಅಸಹ್ಯ ಕಾಣುವುದರ ಜೊತೆಗೆ, ಅತಿಯಾದ ಉರಿಯನ್ನು‌ ಅನುಭವಿಸಬೇಕಾಗುವುದು.‌ ಈ ನೋವಿಗೆ ಮುಕ್ತಿ ಕೊಟ್ಟು ಒಡೆದ ಹಿಮ್ಮಡಿಯನ್ನು ಹೇಗೆ ಮಾಡಬಹುದೆಂದು ತಿಳಿದುಕೊಳ್ಳಿ.
ಹಿಮ್ಮಡಿ ಒಡೆಯದಿರಲು ಶೂ ಮತ್ತು ಸಾಕ್ಸ್ ಧರಿಸಿದರೆ ಒಳ್ಳೆಯದು. ಹೀಗೆ ಮಾಡುವುದರಿಂದ ಹಿಮ್ಮಡಿಯಲ್ಲಿ ಕೊಳೆ ಕೂರುವುದಿಲ್ಲ.

 

 

 

ಸ್ನಾನ ಮಾಡುವಾಗ ಸ್ಕ್ರಬ್ ನಂತೆ ಮೃದುವಾಗಿ ಉಜ್ಜಿದರೆ ಹಿಮ್ಮಡಿಯ ಕೊಳೆಗಳು ಮಾಯವಾಗಿ ಪಾದಗಳು ನುಣುಪಾಗಿ ಉರಿಯೂ ಮಾಯವಾಗುತ್ತದೆ. ಉಗುರು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ನಿಂಬೆ ರಸ ಬೆರೆಸಿ ಪಾದವನ್ನು ಆ ನೀರಿನಲ್ಲಿ ಇಡಬೇಕು. ಉಪ್ಪು ಪಾದವನ್ನು ಮೃದುಗೊಳಿಸುತ್ತದೆ ಮತ್ತು ನಿಂಬೆ ರಸದಿಂದ ಕೊಳೆಯನ್ನು ಹೋಗಲಾಡಿಸಬಹುದು.
ಚರ್ಮ ಒಣಗಲು ಬಿಡದೆ ಪಾದಕ್ಕೆ ವ್ಯಾಸಲಿನ್ ಅಥವಾ ಬಯೋಲಿನ್ ಹಚ್ಚುತ್ತಿದ್ದರೆ ಚರ್ಮ ಮೃದುಗೊಳ್ಳುತ್ತದೆ. ಸಾಕ್ಸ್ ಹಾಕಿಕೊಳ್ಳುವ ಮುನ್ನ ಮಾಯಿಶ್ಚರೈಸರ್ ಹಚ್ಚಿಕೊಂಡರೆ ಚರ್ಮ ಕೋಮಲವಾಗುತ್ತದೆ. ರಾತ್ರಿ ಹೊತ್ತು ಲೇಪಿಸಿಕೊಂಡು ಮಲಗಿದರೆ ಒಳ್ಳೆಯದು.

 

ಚಳಿಗಾಲದಲ್ಲಿ ಚಳಿಗೆ ಹೆದರಿ ಬಹುತೇಕ ಜನರು ನೀರು ಕುಡಿಯುವುದೇ ಇಲ್ಲ, ನಿಮ್ಮ ಹಿಮ್ಮಡಿ ಅಥವಾ ಚರ್ಮ‌ ಬಿರುಕು ಬಿಡಲು‌ ಮೂಲ ಕಾರಣವೇ ಇದು.‌ ನೀವು ಹೆಚ್ಚೆಚ್ಚು ನೀರು ಕುಡಿದರೆ ದೇಹದೊಂದಿಗೆ ಪಾದವನ್ನೂ ತಣ್ಣಗಿಡಬಹುದು. ಇದು ಹಿಮ್ಮಡಿ ಒಡೆಯದಂತೆ ಒಳಗಿನಿಂದ ರಕ್ಷಣೆ ನೀಡುತ್ತದೆ.
ಗ್ಲಿಸರಿನ್ ಜೊತೆ ರೋಸ್ ವಾಟರ್ ಸೇರಿಸಿ ಹಚ್ಚಿಕೊಂಡರೆ ಒಡೆದ ಹಿಮ್ಮಡಿಯನ್ನು ಗುಣಮುಖವಾಗಿಸಬಹುದು.

 

 

 

 

ಚೆನ್ನಾಗಿ ಹಣ್ಣಾದ ಬಾಳೆ ಹಣ್ಣು ತೆಗೆದುಕೊಂಡು ಅದಕ್ಕೆ ಗ್ಲಿಸರಿನ್ ಸೇರಿಸಿ ಒಡೆದ ಪಾದಗಳಿಗೆ ಹಚ್ಚಿಕೊಂಡರೆ ಪಾದ ನುಣುಪಾಗಿ ಉರಿಯೂ ಮಾಯವಾಗುತ್ತದೆ.
ಚಳಿಗಾಲದ ಕಳೆಯುವುದೇ ಕಷ್ಟ, ಅಂತದರಲ್ಲಿ ಹಿಮ್ಮಡಿ ಒಡೆದ ನೋವು ಇನ್ನೂ ಕಷ್ಟ, ಓದಿದಿರಲ್ಲಾ, ಎಲ್ಲರಿಗೂ ಶೇರ್ ಮಾಡಿ.

Please follow and like us:
0
leave a comment

Leave a Reply

Your email address will not be published. Required fields are marked *

Devotional