ಏಪ್ರಿಲ್ನಿಂದ ರಾಷ್ಟ್ರೀಯ ವಿಮಾ ಯೋಜನೆ, ಬಿಪಿಎಲ್/ಎಪಿಎಲ್ ಕಾರ್ಡ್ದಾರರಿಗೆ ಬಂಪರ್ ಆಫರ್!!

ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ಕಾರ್ಯನಿರ್ವಹಣೆ ಮಾಡುವುದೇ ಸರ್ಕಾರ. ಈಗಾಗಲೇ ಜನರ ಕಲ್ಯಾಣಕ್ಕಾಗಿ ಮೋದಿ ಸರ್ಕಾರವು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಸೂರು ಯೋಜನೆ, ಪ್ರಧಾನ ಮಂತ್ರಿ ಸಡಕ್ ಯೋಜನೆ, ಪ್ರಧಾನ ಮಂತ್ರಿ ಜನಧನ ಯೋಜನೆ ಜೊತೆಗೆ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೆ ತಂದಿದ್ದರು.

ಇದು ಕೂಡ ಒಂದು ಆರೋಗ್ಯ ಯೋಜನೆ ಯಾಗಿತ್ತು. ಈ ಯೋಜನೆಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗಿತ್ತು. ಅದೇನೆಂದರೆ, ಮೋದಿಕೇರ್ ಯೋಜನೆ, ಮೋದಿ ಸ್ವಾಸ್ಥ್ಯ ವಿಮಾ ಯೋಜನೆ, ಮೋದಿ ಆರೋಗ್ಯ ವಿಮಾ ಯೋಜನೆ ಇವೆಲ್ಲವನ್ನೂ ಒಟ್ಟಿಗೆ ಸೇರಿಸಿ ರಾಷ್ಟ್ರೀಯ ವಿಮಾ ಯೋಜನೆ ಎಂದು ಕರೆಯಲಾಗುತ್ತಿದೆ. ಈ ಯೋಜನಯಲ್ಲಿ ಫಲಾನುಭವಿಗಳಿಗೆ 5 ಲಕ್ಷದವರೆಗೆ ವಿಮೆಯನ್ನು ‌ನೀಡಲಾಗುತ್ತದೆ.

 

 

 

 

 

ಈ ಯೋಜನೆಯನ್ನು‌ ಪಡೆಯಲು ಇರಬೇಕಾದ ಅರ್ಹತೆಗಳು ಹೀಗಿವೆ:

ಈ ಯೋಜನೆಯು ಬಡಕುಟುಂಬಗಳಿಗೆ ಅನ್ವಯವಾಗಲಿದ್ದು, ಬಡತನ ರೇಖೆಯ ಕೆಳಗಿರುವ ಮತ್ತು ಮೇಲಿರುವ ಎ.ಪಿ.ಎಲ್, ಬಿ.ಪಿ.ಎಲ್ ಕಾಡ್೯ದಾರರು ಈ ಯೋಜನೆಗೆ ಅರ್ಹರು. ಭಾರತೀಯ ಎಲ್ಲಾ ಪ್ರಜೆಗಳು ಈ ಯೋಜನೆಯನ್ನು ಪಡೆಯಬಹುದಾಗಿದೆ.

ಮಾಧ್ಯಮಗಳ ಪ್ರಕಾರ ಈ ಯೋಜನೆಯು ಏಪ್ರಿಲ್ 2018 ರಿಂದ ಜಾರಿಗೆ ಬರಲಿದೆ.

ಅಂತರ್ಜಾಲ ತಾಣದಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದ ಅರ್ಜಿ ಸಲ್ಲಿಸುವ ಕುಟುಂಬ ದವರಿಗೂ ಹಾಗೂ ಅರ್ಜಿ ಪರಿಶೀಲಿಸುವ ಅಧಿಕಾರಿಗಳಿಗೂ ಅನುಕೂಲಕರವಾಗಲಿದೆ.

 

 

ಅರ್ಜಿ ಸಲ್ಲಿಸುವ ವಿಧಾನ:-
1. ಅಧಿಕೃತ ಅಂತರ್ಜಾಲ ತಾಣವನ್ನು ಭೇಟಿ ನೀಡಬೇಕು.
2. ದಾಖಲಾತಿ ಲಿಂಕ್ ನ್ನು ಕ್ಲಿಕ್ ಮಾಡಬೇಕು.
3. ಅಗತ್ಯವಿರುವ ಮಾಹಿತಿಯನ್ನು ಅರ್ಜಿಯಲ್ಲಿ ನಮೂದಿಸಬೇಕು.
4. ಅರ್ಜಿ ಪೂರ್ಣ ಮಾಡಿ ಸಲ್ಲಿಸಬೇಕು. 5. ನಂತರ ಅರ್ಜಿಯು ಪ್ರಕ್ರಿಯೆಗೆ ಒಳಪಡುತ್ತದೆ.

ಈ ಎಲ್ಲಾ ಮಾಹಿತಿಯನ್ನು ಅರ್ಜಿಯಲ್ಲಿ ತುಂಬಿದ ನಂತರ ಯಾವ ಹಂತದಲ್ಲಿ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಯಲು ಅಧಿಕೃತ ಜಾಲ ತಾಣದಲ್ಲಿ ಬಳಕೆದಾರನ ನೊಂದಣಿ ಮಾಡುತ್ತಾರೆ. ಸಂಬಂಧಿಸಿದ ಕಛೇರಿಯು ಮಾಹಿತಿಯನ್ನು ಪರಿಶೀಲಿಸುತ್ತದೆ.

ಪರಿಶೀಲನೆಯ ನಂತರ ಸ್ವೀಕೃತ ಅಥವಾ ತಿರಸ್ಕೃತವಾಗುವುದು ಇಲಾಖೆಯ ನಿರ್ಧಾರವಾಗಿರುತ್ತದೆ.

ಸ್ವೀಕೃತ ಅರ್ಜಿಯ ಪಟ್ಟಿಯನ್ನು ಇಲಾಖೆಯು ಬಿಡುಗಡೆ ಮಾಡುತ್ತದೆ.

ಅರ್ಜಿಯು ಸ್ವೀಕೃತವಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಲು ಅಧಿಕೃತ ಅಂತರ್ಜಾಲ ತಾಣದಲ್ಲಿ ಅರ್ಜಿಯ ಸಂಖ್ಯೆಯನ್ನು ನೀಡಿ ಖಚಿತಪಡಿಸಿಕೊಳ್ಳಬಹುದು. ಆಯ್ಕೆಯಾದ ಪಕ್ಷದಲ್ಲಿ ಕಾಡ್೯ ಅರ್ಜಿದಾರನ ಕೈ ಸೇರುತ್ತದೆ.

ಇದರಿಂದ ಕಾಡ್೯ದಾರನು 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ಪಡೆಯುತ್ತಾರೆ.

ಒಟ್ಟಿನಲ್ಲಿ ಮೋದಿಜಿಯ ಈ ಯೋಜನೆಯು ಭಾರತೀಯ ಪ್ರಜೆಗಳ ಕಲ್ಯಾಣವನ್ನು ಕಾಪಾಡಲಿ ಮತ್ತು ಇದರ ಜೊತೆಗೆ ಹತ್ತು ಹಲವು ಯೋಜನೆ 

 

ಗಳನ್ನು ಮೋದಿ ಸರ್ಕಾರ ತರುವಂತಾಗಲಿ ಎಂದು ಆಶಿಸೋಣ‌ ಅಲ್ಲವೇ?

Please follow and like us:
0
leave a comment

Leave a Reply

Your email address will not be published. Required fields are marked *

Devotional