ಬಡವರಿಗಾಗಿಯೇ ಇರುವಂತಹ ಹೈ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲಿ ಕಡಿಮೆ ವೆಚ್ಚದಲ್ಲಿ ಗುಣ ಮಟ್ಟದ ಚಿಕಿತ್ಸೆ.! ಎಲ್ಲಿ ಗೊತ್ತೇ? ಇದನ್ನು ಓದಿ, ಶೇರ್ ಮಾಡಿ

ಈ ಆಸ್ಪತ್ರೆಯನ್ನು ನಿಜಕ್ಕೂ ಬಡವರ ಪಾಲಿನ ಆಸ್ಪತ್ರೆ ಅನ್ನಬಹುದು, ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಉದ್ಯಮವಾಗಿ ಮಾರ್ಪಾಡಾಗಿರುವ ಆಸ್ಪತ್ರೆ ಹಾಗು ವೈದ್ಯರ ಎದುರು ಈ ಆಸ್ಪತ್ರೆ ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಉತ್ತಮ ಗುಣ ಮಟ್ಟದ ಚಿಕಿತ್ಸೆಯನ್ನು ಕೊಡುತ್ತಿದೆ.
ಜನರ ಕಷ್ಟವನ್ನು ನಿರ್ಲಕ್ಷಿಸಿ ಮಾನವೀಯತೆಯನ್ನು ಮರೆತು ಶವವನ್ನು ಮುಂದೆ ಇಟ್ಟುಕೊಂಡು ಹಣ ಕೀಳುವ ಹಲವಾರು ಆಸ್ಪತ್ರೆಗಳು ಇಂತಹ ಆಸ್ಪತ್ರೆಯನ್ನು ಹಾಗು ವೈದ್ಯರನ್ನು ನೋಡಿ ಕಲಿಯಬೇಕಾಗಿದೆ.

 

 

 

 

ಈ ಬಡವರ ಪಾಲಿನ ಆಸ್ಪತ್ರೆ ಎಲ್ಲಿದೆ ಗೊತ್ತಾ? ಈ ಆಸ್ಪತ್ರೆಯ ವಿಶೇಷತೆ ಏನು.? ಮುಂದೆ ಓದಿ.
ತಮಿಳುನಾಡಿನ ಮದುರೈಯಲ್ಲಿ ಇರುವ ವೇಲಮ್ಮಾಳ್ ಮೆಡಿಕಲ್ ಕಾಲೇಜ್ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ಅನ್ನುವ ಆಸ್ಪತ್ರೆ. 5 ಸ್ಟಾರ್ ಗುಣಮಟ್ಟದ ಆಸ್ಪತ್ರೆ. ಎಲ್ಲಾ ಕಡೆಯೂ ಕ್ಲೀನ್, ನೀಟ್‌. ಪ್ರತಿ ಸೆಕ್ಷನ್ ಗೂ 4 ವೈದ್ಯರು, ಇದ್ದಾರಂತೆ.

 

 

 

 

 

ಲಾಯರ್ ಒಬ್ಬರು ತಮ್ಮ ಸ್ನೇಹಿತರನ್ನು ಅಲ್ಲಿಗೆ ಕರೆದುಕೊಂಡು ಹೋಗಿದ್ದರಂತೆ. ಅಲ್ಲಿದ್ದ ನಾಲ್ಕು ದಿನಗಳಲ್ಲಿ ಅವರಿಗೆ ಸ್ಕಾನಿಂಗ್, ಇಸಿಜಿ, ಔಷಧ ಎಲ್ಲಾ ಸೇರಿ ಖರ್ಚಾಗಿದ್ದು ಕೇವಲ 13,500/- ರೂಗಳಂತೆ., ಅದೇ ಇಲ್ಲಿಯ ಮಲ್ಟಿ ಸ್ಪೆಷಾಲಿಟಿ‌ ಆಸ್ಪತ್ರೆಗಳಾಗಿದ್ದರೆ 2 ಲಕ್ಷದ ಹತ್ತಿರ ಖರ್ಚಾಗುತ್ತಿತ್ತೆಂದು ಊಹಿಸಿದ್ದಾರೆ.
ಇಲ್ಲಿ ಡಾಕ್ಟರ್ ಫೀಸ್,
ಅಡ್ಮಿಷನ್ ಫೀಸ್ ಯಾವುದೂ ಇಲ್ಲ.
ರೋಗಿ ದಾಖಲಾಗಿ ಗುಣಮುಖವಾಗುವವರೆಗೂ ಉತ್ತಮ ಗುಣಮಟ್ಟದ ಊಟ, ತಿಂಡಿಯನ್ನು ಉಚಿತವಾಗಿ ಅವರೆ ಕೊಡುತ್ತಾರೆ.

 

 

 

ಎಕ್ಸ್ ರೇ ಗೆ 50% ಡಿಸ್ ಕೌಂಟ್ ಜಿಟಲ್ ಇಸಿಜಿ ಗೆ 50% ಡಿಸ್ಕೌಂಟ್, ವಿಡಿಯೋ ಎಂಡೋಸ್ಕೊಪಿ ಗೆ 2000 ರೂಪಾಯಿ.
ಆಪರೇಷನ್ ಗೆ ಚಾರ್ಜ್ ಇಲ್ಲ ಔಷಧಿಗಳಿಗೆ 8% ಡಿಸ್ಕೌಂಟ್ ಸಿಗುತ್ತದೆ.
ದುಡ್ಡು ಮಾಡೋಕೆ ಅಂತಾನೆ ಇರುವ ಅದೆಷ್ಟೋ ಆಸ್ಪತ್ರೆಗಳ ಮದ್ಯ ಈ ಆಸ್ಪತ್ರೆ ನಿಜಕ್ಕೂ ಆಶ್ಚರ್ಯಕರವಾಗಿದೆ ಮತ್ತು ಹೆಮ್ಮೆಯ ಸಂಗತಿಯಾಗಿದೆ.

ಇಂತಹ ಅತ್ಯುತ್ತಮ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ, ಬಡವರಿಗೆ ಉಪಯೋಗವಾಗಲಿ. ಎಲ್ಲರಿಗೂ ಶೇರ್ ಮಾಡಿ

Please follow and like us:
0
leave a comment

Leave a Reply

Your email address will not be published. Required fields are marked *

Health News