ಕೇವಲ 10 ಸಾವಿರ ರೂಪಾಯಿಯಲ್ಲಿ‌ ಜೀವನ ನಡೆಸುವ ಮುಖ್ಯಮಂತ್ರಿ,

ರಾಜಕಾರಣ ಎಂದರೆ ಹೊಲಸು‌, ರಾಜಕಾರಣಿಗಳು ಎಂದರೆ ಅಪ್ರಾಮಾಣಿಕರು ಎಂಬುವ ಭಾವನೆ ಬಹುತೇಕ ಎಲ್ಲ ಜನರಿಗೆ ಬಂದುಬಿಟ್ಟಿದೆ. ಅದಕ್ಕೆ ಕಾರಣ ಇಂದಿನ ರಾಜಕಾರಣಿಗಳ ರೀತಿ ನೀತಿ, ಎಲೆಕ್ಷನ್ಗೂ ಮೊದಲು ಭರವಸೆಯ ಸುರಿಮಳೆ, ನಂತರ ಯಾವುದೂ ನೆನಪಿರದಂತೆ ನಡೆದುಕೊಳ್ಳುವ ರೀತಿ, ಲೂಟಿ ಮಾಡುವ ಹಣ, 5 ವರ್ಷದಲ್ಲಿ ಶ್ರೀಮಂತರಾಗಿರುತ್ತಾರೆ, ಇಂತಹವರೇ ತುಂಬಿಕೊಂಡಿರುವ ಇಂದಿನ ದಿನಗಳಲ್ಲಿ ಪ್ರಾಮಾಣಿಕ ರಾಜಕಾರಣಿಯೊಬ್ಬರು ಇದ್ದಾರೆ.‌ ಅವರು ಬೇರೆ ಯಾರೂ ಅಲ,‌ 20 ವರ್ಷಗಳಿಂದ ಯಾವ ಪಕ್ಷವೂ ಸೋಲಿಸಲಾಗದ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್.

 

 

20 ವರ್ಷದಿಂದ ತ್ರಿಪುರಾ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದವರು ಇವರು, ಆದರೆ ಮೊನ್ನೆ ನಡೆದ ಚುನಾವಣೆಯಲ್ಲಿ ಸೋತುಹೋದರು. ಕಮ್ಯುನಿಸ್ಟ್ ಪಕ್ಷದವರಾಗಿದ್ದರು ಇವರು. ಮಾಣಿಕ್ ಸರ್ಕಾರ್ ಸೋತು ಹೋಗಿದ್ದರಿಂದ ಈಗ ಪಕ್ಷದ ಅತಿಥಿ ಗೃಹದಲ್ಲಿ ವಾಸಿಸುತ್ತಿದ್ದಾರೆ.‌
ಮಾಣಿಕ್ ಸರ್ಕಾರ್ ರವರು 20 ವರ್ಷಗಳಿಂದ ತ್ರಿಪುರಾ ರಾಜ್ಯದ ಪ್ರಾಮಾಣಿಕ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟು ವರ್ಷ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರೂ ಕೂಡ ಇವರ ಬಳಿ ವಾಸಿಸಲು ಒಂದು ಸ್ವಂತ ಮನೆ ಕೂಡ ಇಲ್ಲ. ಹಾಗಾಗಿ ಇವರು ತಾವು ಮುಖ್ಯಮಂತ್ರಿಯಾಗಿದ್ದಾಗ ವಾಸಿಸುತ್ತಿದ್ದ ಮನೆಯನ್ನು ಖಾಲಿ ಮಾಡಿ ತಮ್ಮ ಪತ್ನಿ ಪಾಂಚಾಲಿಯೊಂದಿಗೆ ಈಗ ತಮ್ಮ ಪಕ್ಷದ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದಾರೆ.

ತಮ್ಮ ಇಡೀ ಜೀವನದಲ್ಲಿ ಇವರು ಕೇವಲ 900 ಚದರ ಅಡಿ ಆಸ್ತಿಯನ್ನ ಮಾತ್ರ ಸಂಪಾದಿಸಿದ್ದಾರೆ. ಮಕ್ಕಳಿಲ್ಲದ ಕಾರಣ ಅದನ್ನೂ ಸಹ ನೆಂಟರಿಗೆ ಕೊಟ್ಟಿದ್ದಾರೆ.
ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಆಸ್ತಿ ವಿವರದ ಪ್ರಕಾರ ಇವರ ಬಳಿ ಬಂಗಲೆ,ಕಾರು,ಆಸ್ತಿ, ಮೊಬೈಲ್ ಮನೆ ಯಾವುದೂ ಇಲ್ಲ, ಸರ್ಕಾರದ ಸಂಬಳವನ್ನು ತೆಗೆದುಕೊಳ್ಳದೇ ಪಕ್ಷ ಕೊಡುವ 10 ಸಾವಿರ ರೂಪಾಯಿಯಲ್ಲಿ‌ ಜೀವನ ನಡೆಸುತ್ತಿದ್ದರು.
ಇಂತಹ ಆಶ್ಚರ್ಯಕರ ಸುದ್ದಿಯನ್ನು ಓದಿದಿರಲ್ಲಾ, ಎಲ್ಲರಿಗೂ ಶೇರ್ ಮಾಡಿ.

Please follow and like us:
0
leave a comment

Leave a Reply

Your email address will not be published. Required fields are marked *

Devotional