ಎಸ್.ಬಿ.ಐ.‌ ಬ್ಯಾಂಕ್ ನೀಡಿದೆ ಸಿಹಿಸುದ್ದಿ.. ಓದಿ ಶೇರ್ ಮಾಡಿ.

ದೇಶದ ಅತೀ ದೊಡ್ಡ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ ಅದರ ಗ್ರಾಹಕರಿಗೊಂದು ಸಿಹಿ ಸುದ್ದಿ ನೀಡಿದೆ. ಕನಿಷ್ಟ ಬ್ಯಾಲೆನ್ಸ್ ಮೇಲಿನ ದಂಡವನ್ನು ಕಡಿತಗೊಳಿಸುವುದಾಗಿ ಘೋಷಣೆ ಮಾಡಿದೆ.
ಪಟ್ಟಣ ಮತ್ತು ಗ್ರಾಮೀಣ ಕೇಂದ್ರಗಳಲ್ಲಿ ಈ ಶುಲ್ಕವನ್ನು ರೂ.40 ರಿಂದ ರೂ.12 ಮತ್ತು ರೂ 10 ಕ್ಕೆ ಇಳಿಸಲಾಗಿದೆ ಎಂದು ಎಸ್.ಬಿ.ಐ ಮಾಹಿತಿ ನೀಡಿದೆ.

 

 

 

 

ನಗರ ಪ್ರದೇಶಗಳಲ್ಲಿ ತಿಂಗಳಿಗೆ ಸರಾಸರಿ ಕನಿಷ್ಟ ಬ್ಯಾಲೆನ್ಸ್ ಕಾಯ್ದುಕೊಳ್ಳದ ಖಾತೆಗಳ ಮೇಲೆ ಈಗಿರುವ ರೂ.50 ನ್ನು 15 ರೂಗಳಿಗೆ ಇಳಿಕೆ ಮಾಡಿದೆ. ಇದರಿಂದ ಬಹುತೇಕ ಎಸ್.ಬಿ.ಐ ಖಾತೆದಾರರಿಗೆ ಪ್ರಯೋಜನವಾಗಲಿದೆ.
ಬ್ಯಾಂಕ್ ಖಾತೆಗಳಲ್ಲಿ ಕನಿಷ್ಟ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರು, ಎಸ್.ಬಿ.ಐ. ನ ಉಳಿತಾಯ ಖಾತೆ ಮೇಲೆ ಯಾವುದೇ ದಂಡ ಇಲ್ಲದೇ ಇರುವುದರಿಂದ ತಮ್ಮ ಖಾತೆಗಳನ್ನು ಉಳಿತಾಯ ಬ್ಯಾಂಕ್ ಖಾತೆಗೆ ಬದಾಲಿಯಿಸಿಕೊಳ್ಳಬಹುದು.

 

 

 

21 ವರ್ಷಗಳವರೆಗಿನ ವಿದ್ಯಾರ್ಥಿಗಳಿಗೂ ವಿನಾಯಿತಿಗಳನ್ನು ನೀಡಲಾಗುತ್ತಿದೆ. ಉಳಿತಾಯ ಬ್ಯಾಂಕ್ ಖಾತೆಗಳನ್ನು ಮೂಲ ಉಳಿತಾಯ ಖಾತೆಗಳಿಗೆ ಗ್ರಾಹಕರು ಉಚಿತವಾಗಿ ಪರಿವರ್ತನೆ ಮಾಡಿಕೊಳ್ಳಬಹುದಾಗಿದೆ.
ತಮ್ಮ ಗ್ರಾಹಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಉಳಿತಾಯ ಖಾತೆಯ ಬ್ಯಾಲೆನ್ಸ್ ಮೇಲಿನ ದಂಡವನ್ನು ಕಡಿತಗೊಳಿಸಲಾಗಿದೆ.

 

 

 

 

 

ಗ್ರಾಹಕರ ಹಿತಾಸಕ್ತಿ ಮತ್ತು ನಿರೀಕ್ಷೆಗಳನ್ನು ಪೂರೈಸುವತ್ತ ಬ್ಯಾಂಕ್ ಸಾಕಷ್ಟು ಕೆಲಸವನ್ನು ಮಾಡುತ್ತಿದೆ ಎಂದು ಎಸ್.ಬಿ.ಐ ನಿರ್ದೇಶಕ ಪಿ.ಕೆ. ಗುಪ್ತಾ ಅವರು ಹೇಳಿದ್ದಾರೆ.

ಇಂತಹ ಅತ್ಯುತ್ತಮ ಮಾಹಿತಿಯನ್ನು ಓದಿದಿರಲ್ಲಾ, ಎಲ್ಲರಿಗೂ ಶೇರ್ ಮಾಡಿ

Please follow and like us:
0
leave a comment

Leave a Reply

Your email address will not be published. Required fields are marked *

Devotional