ಕಷ್ಟದ ಜೀವನವನ್ನು ಎದುರಿಸಿ IPS ಆಫೀಸರ್ ಆದ ಸಾಧಕನ ಕಥೆ.. ಎಲ್ಲರಿಗೂ ಸ್ಪೂರ್ಥಿ

ಕಷ್ಟದ ಜೀವನವನ್ನು ಎದುರಿಸಿ IPS ಆಫೀಸರ್ ಆದ ಸಾಧಕನ ಕಥೆ.. ಎಲ್ಲರಿಗೂ ಸ್ಪೂರ್ಥಿ

ರವಿ ಡಿ ಚನ್ನಣ್ಣನವರ್ ಬಗ್ಗೆ ಎಲ್ಲರೂ ಕೇಳಿರುತ್ತೀರಿ.. ಕಷ್ಟದ ಜೀವನವನ್ನು ಎದುರಿಸಿ IPS ಆಫೀಸರ್ ಆದ ಸಾಧಕನ ಕಥೆ ಇದು..
ರವಿ ಧ್ಯಾಮಪ್ಪ ಚನ್ನಣ್ಣನವರ್ ಕರ್ನಾಟಕದ ಒಬ್ಬ ದಕ್ಷ ಭಾರತೀಯ ನಾಗರಿಕ ಸೇವಕರು. ಇವರು ೨೦೦೮ ರ ತಂಡದಲ್ಲಿ ತರಭೇತಿ ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿ. ಗದಗ್ ಜಿಲ್ಲೆಯವರಾದ ರವಿ ಡಿ.ಸಿ ಅವರು ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪ್ರಾರಂಭಿಸಿದರು.ಇವರು ಮೊದಲು ಧಾರವಾಡ ಮತ್ತು ಹಾಸನ ಜಿಲ್ಲೆಗಳಲ್ಲಿ ಎಸ್ಪಿ ಆಗಿ ಸೇವೆ ಸಲ್ಲಿಸಿದ್ದರು.


ರವಿ ಅವರು ಗದಗ ತಾಲೂಕಿನ ನೀಲಗುಂದ ಗ್ರಾಮದಲ್ಲಿ ೨೩ ಜುಲೈ ೧೯೮೫ ರಂದು ಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗೆ ಜನಿಸಿದರು. ಇವರು ಮೂಲತಃ ಕೃಷಿ ಕಾರ್ಮಿಕರ ಕುಟುಂಬಕ್ಕೆ ಸೇರಿದವರು. ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪ್ರಾರಂಭಿಸಿದರು. ಬಡ ಕುಟುಂಬದಲ್ಲಿ ಹುಟ್ಟಿದ ಇವರು ಶಿಕ್ಷಣದ ವೆಚ್ಚ ಭರಿಸಲು ಹೊಟೆಲ್‍ಗಳಲ್ಲಿ ಕೆಲಸ ಮಾಡುತ್ತಿದ್ದರು.೨೦೦೮ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ನಡೆಸಿದ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ೭೦೩ ನೇ ಸ್ಥಾನ ಪಡೆದರು.


ಗದಗದಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ನಡೆಸುತ್ತಿದ್ದಾಗ ತಮ್ಮ ಶೈಕ್ಷಣಿಕ ವೆಚ್ಚಗಳು ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಸಲು ಅವರು ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ. ಪದವಿಗೆ ಸೇರ್ಪಡೆಗೊಂಡರು. ನಂತರ ರವಿ ಅವರು ಅರೆಕಾಲಿಕ ಕೆಲಸ ಹಾಗೂ ಶೈಕ್ಷಣಿಕ ಅಧ್ಯಯನವನ್ನು ಮುಂದುವರಿಸಿದರು. ಸಂಜೆ ೬ ಗಂಟೆಯಿಂದ-ಮಧ್ಯರಾತ್ರಿಯವರೆಗೆ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದರು.


ಮೇ ೨೦೦೭ ರಲ್ಲಿ, ಐಎಎಸ್ ಪರೀಕ್ಷೆಯ ತರಭೇತಿಯ ತರಗತಿಗಳಿಗೆ ಹಾಜರಾಗಲು ರವಿ ಅವರು ಹೈದರಾಬಾದ್ ಗೆ ತೆರಳಿದರು. ಅವರು ಆರ್ಥಿಕ ವೆಚ್ಚವನ್ನು ನಿಭಾಯಿಸುವಂತ ಇನ್ಸ್ಟಿಟ್ಯೂಟ್ ಸೇರಿ ಶ್ರದ್ಧೆಯಿಂದ ಪರೀಕ್ಷೆಗೆ ತಯಾರಾಗಲು ಪ್ರಾರಂಭಿಸಿದರು. ಇವರು ಮಾರ್ಚ್ ೧೨, ೨೦೧೨ ರಂದು ಡಾ.ತ್ರಿವೇಣಿಯವರನ್ನು ವಿವಾಹವಾದರು.

ರವಿ ಅವರು ೨೦೧೧ ರಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತದನಂತರ ಧಾರವಾಡ, ಹೊಸಪೇಟೆ, ಹಾಸನ, ಬೆಂಗಳೂರು,ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ ನಂತರ ಈಗ ಅವರು ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


ಇವರು ಬೆಳಗಾವಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿದ್ದ ಸಮಯದಲ್ಲಿ ನಡೆದ ಕೋಮು ಗಲಭೆಯಲ್ಲಿ ಕಾರ್ಯ ನಿರ್ವಹಿಸಿದರು. ಅಲ್ಲಿ ತೊಂದರೆಗಾರರ ​​ಮನೆಗಳನ್ನು ಪ್ರವೇಶಿಸಿ ಅವರನ್ನು ಬಂಧಿಸಿದರು.


೨೦೧೫ ರಲ್ಲಿ ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರವನ್ನು ಚಾಣಾಕ್ಷ್ಯತನದಿಂದ ಹತೋಟಿಗೆ ತರುವಲ್ಲಿ ಯಶಸ್ವಿಯಾದರು. ಮಹಿಳಾ ಸುರಕ್ಷತೆಯನ್ನು ಉತ್ತೇಜಿಸಲು “ಒನಕೆ ಓಬವ್ವ ಪಡೆ” ಎಂಬ ತಂಡವನ್ನು ರಚಿಸಿದರು..


ಸ್ವಯಂ ಸುರಕ್ಷತೆ ತರಬೇತಿ, ಜನ ಸ್ನೇಹಿ ಪೊಲೀಸ್ ಹಾಗೂ ಗ್ರಾಮ ವಾತ್ಸವ್ಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡಲು ಪೊಲೀಸ್ ಕ್ಯಾಂಟೀನ್ ಮತ್ತು ಪೊಲೀಸ್ ವೈದ್ಯಕೀಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು.

ರೈತರಿಗೆ ಸಹಾಯವಾಗಲೆಂದು “ನಮ್ಮೂರಲೊಬ್ಬ ಸಾಧಕ” ಯೋಜನೆಯನ್ನು ಪ್ರಾರಂಭಿಸಿದರು.ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಉಚಿತ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್(ಯು.ಪಿ.ಎಸ್.ಸಿ) ಪರೀಕ್ಷೆಗೆ ತರಬೇತಿ ನೀಡಲು ಪ್ರಾರಂಭಿಸಿದರು.

ಹೆತ್ತವರು ಆಸ್ತಿ ಮಾಡಿಲ್ಲವೆಂದು ನೋಡುವ ಮಕ್ಕಳ ನಡುವೆ ಅರೆಕಾಲಿಕ ಕೆಲಸ ಮಾಡಿಕೊಂಡು IPS ಅಧಿಕಾರಿಯಾದ ರವಿ ರವರು ಮಾದರಿಯೇ ಸರಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News