ರಾಹುಲ್ ಡ್ರಾವಿಡ್ ಯಾವ ವಯಸ್ಸಿನಲ್ಲಿ ಕ್ರಿಕೇಟ್ ಗೆ ಬಂದರು ಗೊತ್ತಾ?? ಆಡುವ ವಯಸ್ಸಿನಲ್ಲಿ ಪ್ರೊಫೆಷನಲ್ ಕ್ರಿಕೆಟರ್ ಆದ ಕಥೆ ಇಲ್ಲಿದೆ ನೋಡಿ

ರಾಹುಲ್ ಡ್ರಾವಿಡ್ ಯಾವ ವಯಸ್ಸಿನಲ್ಲಿ ಕ್ರಿಕೇಟ್ ಗೆ ಬಂದರು ಗೊತ್ತಾ??
ಆಡುವ ವಯಸ್ಸಿನಲ್ಲಿ ಪ್ರೊಫೆಷನಲ್ ಕ್ರಿಕೆಟರ್ ಆದ ಕಥೆ ಇಲ್ಲಿದೆ ನೋಡಿ

ಕ್ರಿಕೇಟ್ ದಂತ ಕಥೆ ಹೆಮ್ಮೆಯ ಕನ್ನಡಿಗ ರಾಹುಲ್ ದ್ರಾವಿಡ್ ರವರಿಗೆ 44ನೇ ವರ್ಷದ ಹುಟ್ಟು ಹಬ್ಬದ ಶುಭಾಷಯಗಳು.. ಅವರ ಕಿರು ಮಾಹಿತಿ ಭಂಡಾರ ಇಲ್ಲಿದೆ ನೋಡಿ ಶೇರ್ ಮಾಡಿ ಶುಭಾಶಯ ತಿಳಿಸಿ

ರಾಹುಲ್ ಶರದ್ ದ್ರಾವಿಡ್ (ಜನನ: ಜನವರಿ ೧೧, ೧೯೭೩) – ಭಾರತ ಕ್ರಿಕೆಟ್ ತಂಡದ ಆಟಗಾರರಲ್ಲೊಬ್ಬರು ಮತ್ತು ತಂಡದ ಮಾಜಿ ನಾಯಕ. ಮದ್ಯಪ್ರದೇಶ ಮೂಲದವರಾದ ದ್ರಾವಿಡ್ ಪೂರ್ಣ ಕನ್ನಡಿಗರು. ಟೆಸ್ಟ್ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸುವುದರಲ್ಲಿ, ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ನಂತರ ಮೂರನೇಯ ಭಾರತೀಯ.

ಫೆಬ್ರುವರಿ ೧೪, ೨೦೦೭ ರಂದು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ೧೦,೦೦೦ಕ್ಕೂ ಅಧಿಕ ರನ್ನುಗಳನ್ನು ಗಳಿಸಿದ ವಿಶ್ವದಲ್ಲಿ ೬ನೇ ಆಟಗಾರ,


ಸಚಿನ್ ತೆಂಡೂಲ್ಕರ್ ಮತ್ತು ಸೌರವ್ ಗಂಗೂಲಿ ನಂತರ ಮೂರನೇ ಭಾರತೀಯ. ಇವರು ಅಕ್ಟೋಬರ್ ೨೦೦೫ರಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗಿ, ಸೆಪ್ಟೆಂಬರ್ ೨೦೦೭ ರಲ್ಲಿ ತಂಡದ ನಾಯಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.


ರಾಹುಲ್ ಡ್ರಾವಿಡ್ ಭಾರತೀಯ ಪ್ರಿಮಿಯರ್ ಲೀಗ್ ನ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ೨ ವರ್ಷ್ ‘ಐಕಾನ್ ಆಟಗಾರ’ನಾಗಿ ಆಡಿ, ಈಗ ಜೈಪೂರದ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

ದ್ರಾವಿಡ ಅವರು ತಮ್ಮ ೧೨ನೇ ವಯಸ್ಸಿನಲ್ಲೇ ಕ್ರಿಕೆಟ್ ಆಡಲು ಪ್ರಾರಂಭಿಸಿದರು ಮತ್ತು ಕರ್ನಾಟಕ ರಾಜ್ಯದ ಪರವಾಗಿ ಅಂಡರ್-೧೫, ಅಂಡರ್-೧೭, ಅಂಡರ್-೧೯ ಮಟ್ಟದ ತಂಡಗಳಲ್ಲಿ ಆಡಿದ್ದರು. ಇವರ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಮಾಜಿ ಕ್ರಿಕೆಟ್ ಆಟಗಾರರಾದ ಕೆಕಿ ತಾರಾಪೊರ್‌ರವರು.

ತಮ್ಮ ಶಾಲೆಗೆ ಆಡಿದ ಮೊದಲನೆಯ ಪಂದ್ಯದಲ್ಲೇ ಶತಕ ಬಾರಿಸಿದ ದ್ರಾವಿಡ್, ಬ್ಯಾಟ್ಟಿಂಗ್ ಜೊತೆಗೆ ವಿಕೆಟ್ ಕೀಪಿಂಗ್ ಕೂಡ ಮಾಡುತ್ತಿದ್ದರು. ಆದರೆ ಇವರು ಮಾಜಿ ಟೆಸ್ಟ್ ಆಟಗಾರರಾದ ಗುಂಡಪ್ಪ ವಿಶ್ವನಾಥ್, ರೋಜರ್ ಬಿನ್ನಿ, ಬ್ರಿಜೇಶ್ ಪಟೇಲ್ ಮತ್ತು ತಾರಾಪೊರ್ ರವರ ಸಲಹೆಯಂತೆ ವಿಕೆಟ್ ಕೀಪಿಂಗ್ ಮಾಡುವುದನ್ನು ನಿಲ್ಲಿಸಿದರು.

ಗೌರವ ಡಾಕ್ಟರೇಟ್‌ ನಿರಾಕರಣೆ :
ಬೆಂಗಳೂರು ವಿಶ್ವವಿದ್ಯಾಲಯವು 52ನೇ ಘಟಿಕೋತ್ಸವದ ಅಂಗವಾಗಿ ತಮಗೆ ನೀಡಲು ನಿರ್ಧರಿಸಿದ್ದ ಗೌರವ ಡಾಕ್ಟರೇಟ್‌ ಪದವಿಯನ್ನು ನಯವಾಗಿ ನಿರಾಕರಿಸಿದ ರಾಹುಲ್‌ ದ್ರಾವಿಡ್‌ ಸಂಶೋಧನೆ ಮಾಡಿಯೇ ಡಾಕ್ಟರೇಟ್‌ ಪಡೆಯುವುದಾಗಿ ತಿಳಿಸಿದ್ದಾರೆ.

ನಮ್ಮ ನಾಡಿನ ಹೆಮ್ಮೆಯ ಕನ್ನಡಿಗನಿಗೆ ಶೇರ್ ಮಾಡುವ ಮೂಲಕ ಶುಭಾಶಯ ತಿಳಿಸಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News