ನೀವು ತೆಳ್ಳಗಿದ್ದೀರೆಂಬ ಚಿಂತೆಯೇ? ಚಿಂತೆ ಬಿಡಿ ಇದನ್ನು ಓದಿ..

ಬಹಳಷ್ಟು ಜನ ತಾವು ದಪ್ಪ ಇದ್ದೀವಿ‌ ಅಂತ ತಲೆಕೆಡಿಸಿಕೊಂಡರೆ ಮತ್ತೆ ಕೆಲವರಿಗೆ‌ ತಾವು ಸಣ್ಣ ಇದ್ದೀವಿ ಎಂಬ ನೋವು ಕಾಡುತ್ತಿರುತ್ತದೆ, ನೀವೂ ದಪ್ಪವಾಗಬೇಕೆ? ಇದನ್ನು ಫಾಲೋ ಮಾಡಿ..
ಅಂಜೂರ ಹಣ್ಣು- 5,6 ಅಂಜೂರ ಹಣ್ಣನ್ನು‌ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ತಿಂದರೆ ನಿಮ್ಮ ತೂಕ ಹೆಚ್ಚಾಗುತ್ತದೆ
ಆಲೂಗಡ್ಡೆ- ಆಲೂಗಡ್ಡೆ ನಿಮ್ಮ ತೂಕ ಏರಿಸುವಲ್ಲಿ ಸಹಕಾರಿ, ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು, ಅದರ ಜೊತೆ ಬೆಣ್ಣೆಯನ್ನು ಹಚ್ಚಿ ತಿಂದರೆ ತೂಕ ಹೆಚ್ಚಿಸಿಕೊಳ್ಳಬಹುದು
ಮಾವಿನ ಹಣ್ಣು- ಮಾವಿನ ಹಣ್ಣಿನಲ್ಲಿ ತೂಕ ಹೆಚ್ಚಿಸುವ ಗುಣವಿದೆ, ಹಸಿದಾಗ ಹಲಸು, ಉಂಡಾಗ ಮಾವು ಎಂಬ ಹಳೆಯ ಗಾದೆಯೇ ಇದೆ, ಊಟಾದ ನಂತರ ಮಾವಿನ ಹಣ್ಣನ್ನು ತಿನ್ನುವುದರಿಂದ ನಿಮ್ಮ ತೂಕ ಖಂಡಿತ ಹೆಚ್ಚಾಗುತ್ತದೆ, ಮಾವಿನ ಹಣ್ಣಿನ ಜೊತೆ ಹಾಲು ಹಾಕಿ ಸ್ವಲ್ಪ ಸಕ್ಕರೆ ಸೇರಿಸಿ ಜ್ಯೂಸ್ ಮಾಡಿ ಕುಡಿಯುವುದರಿಂದ ತೂಕ ಹೆಚ್ಚಿಸಿಕೊಳ್ಳಬಹುದು
ಒಣದ್ರಾಕ್ಷಿ- 8, 10ಒಣದ್ರಾಕ್ಷಿ ಹಣ್ಣನ್ನು ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಎದ್ದ ಕೂಡಲೇ ತಿನ್ನುವುದರಿಂದ ತೂಕವನ್ನು ‌ಹೆಚ್ಚಿಸಿಕೊಳ್ಳಬಹುದು
ಬಾಳೆಹಣ್ಣು- ಪ್ರತಿನಿತ್ಯ ಬಾಳೆಹಣ್ಣನ್ನು ತಿನ್ನುವುದರಿಂದ ದೇಹದ ತೂಕ ಏರಿಸಿಕೊಳ್ಳಬಹುದು, ಬಾಳೆಹಣ್ಣಿನಲ್ಲಿ ಕ್ಯಾಲೊರಿ ಇರುವುದರಿಂದ ನಿತ್ಯವೂ ಒಂದು ಬಾಳೆಹಣ್ಣನ್ನು ತಿಂದು ಹಾಲು ಕುಡಿದರೆ ತೂಕ ಏರಿಸಿಕೊಳ್ಳಬಹುದು
ಎಣ್ಣೆಯ ಪದಾರ್ಥ- ಹೆಚ್ಚಿನ ಎಣ್ಣೆಯ ಪದಾರ್ಥಗಳ ಬಳಕೆಯಿಂದ ದೇಹದ ತೂಕ ಹೆಚ್ಚಿಸಿಕೊಳ್ಳಬಹುದು
ಹಾಲು- ಪ್ರತಿರಾತ್ರಿ ಊಟದ ನಂತರ ಹಾಲಿನ ಜೊತೆ ಸಕ್ಕರೆ ಬೆರೆಸಿ ಕುಡಿಯುವುದರಿಂದ ದೇಹದ ತೂಕ ಏರಿಸಿಕೊಳ್ಳಬಹುದು
ಬಾದಾಮಿ- ದಿನಕ್ಕೆ 2 ಬಾದಾಮಿ ತಿಂದರೆ ಸಾಕು ಹೆಚ್ಚುವುದು ತೂಕ, ಹಸಿ ಬಾದಾಮಿಯನ್ನು ಸಿಪ್ಪೆ ತೆಗೆದು ನಿತ್ಯ ತಿಂದರೆ ನೀವು ದಪ್ಪ ಆಗಬಹುದು, ಶಕ್ತಿವಂತರೂ ಆಗಬಹುದು, ಸುಸ್ತನ್ನು ತಡೆಗಟ್ಟುವ ಶಕ್ತಿ ಬಾದಾಮಿಗಿದೆ
ಮೊಳಕೆ ಕಾಳುಗಳು- ಹೆಸರು ಕಾಳು, ಕಡಲೆ, ಹುರುಳಿ, ಶೇಂಗಾ, ಮುಂತಾದ ಕಾಳುಗಳನ್ನು ನೀರಿನಲ್ಲಿ ನೆನೆಸಿ ಚೆನ್ನಾಗಿ ನೆನೆದು ಮೊಳಕೆ ಬಂದ ನಂತರ ಅದನ್ನು ತಿನ್ನುವುದರಿಂದ ದೇಹದ ತೂಕ ಹೆಚ್ಚಿಸಿಕೊಳ್ಳಬಹುದು
ಮೊಟ್ಟೆ- ಮೊಟ್ಟೆಯಲ್ಲಿ ಅಧಿಕ ಕೊಬ್ಬಿನ ಅಂಶವಿದ್ದು, ದೇಹದ ತೂಕ ಹೆಚ್ಚಾಗಲು ಸಹಾಯಕಾರಿ, ದಿನಕ್ಕೆ ಎರಡರಂತೆ ಮೊಟ್ಟೆಯ ಬಿಳಿ ಭಾಗವನ್ನು ತಿಂದರೆ ತಿಂಗಳ ಒಳಗೆ ನೀವು ತೂಕ ಹೆಚ್ಚಿಸಿಕೊಳ್ಳುವಿರಿ.
ತುಪ್ಪ- ಬಹುತೇಕರು ತಾವೆಲ್ಲಿ ದಪ್ಪವಾಗಿಬಿಡುತ್ತೇವೋ ಎಂಬ ಕಾರಣದಿಂದ ತುಪ್ಪವನ್ನು ತಿನ್ನುವುದೇ ಇಲ್ಲ, ಆದರೆ ಆರೋಗ್ಯವಂತನಾಗಿ ಬದುಕಬೇಕೆಂದರೆ ತುಪ್ಪ ಅತ್ಯಗತ್ಯ, ಅಲ್ಲದೇ ತುಪ್ಪ ತೂಕವನ್ನು ಹೆಚ್ಚು ಮಾಡುವಲ್ಲಿಯೂ ಸಹಕಾರಿಯಾಗಿದೆ, ಪ್ರತಿನಿತ್ಯ ತುಪ್ಪವನ್ನು ಸೇವಿಸುವುದರಿಂದ ದೇಹದ ತೂಕವೂ ಹೆಚ್ಚುತ್ತದೆ ಮತ್ತು ಎಲುಬುಗಳು ಗಟ್ಟಿಯಾಗುತ್ತವೆ.
ನೀವು ಓದಿದಿರಲ್ಲಾ? ಇನ್ನೇಕೆ ತಡ? ಎಲ್ಲರಿಗೂ ಶೇರ್ ಮಾಡಿ, ದಪ್ಪಗಾಗಲು ಸಹಾಯ ಮಾಡಿ

Please follow and like us:
0
leave a comment

Leave a Reply

Your email address will not be published. Required fields are marked *

Devotional