ಪ್ರೇಮ ಬರಹದ ನಾಯಕ ಚಂದನ್ ರವರ ಕೋಪಕ್ಕೆ ಕಾರಣ ಏನು?? ನಿವೇದಿತಾ ಗೌಡ ಯಾಕೆ ಇಲ್ಲಿ ಬಂದ್ರು..

ಪ್ರೇಮ ಬರಹದ ನಾಯಕ ಚಂದನ್ ರವರ ಕೋಪಕ್ಕೆ ಕಾರಣ ಏನು?? ನಿವೇದಿತಾ ಗೌಡ ಯಾಕೆ ಇಲ್ಲಿ ಬಂದ್ರು..

ಈ ವಾರ ಬಿಡುಗಡೆಯಾದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಿರ್ದೇಶನದ ಚಂದನ್ ಹಾಗೂ ಐಶ್ವರ್ಯ ಅರ್ಜುನ್ ಅಭಿನಯದ ಪ್ರೇಮ ಬರಹ ಎಲ್ಲರ ಮನಗೆದ್ದು ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ಎಲ್ಲರಿಗೂ ತಿಳಿದೇ ಇದೆ..

ರೆಬೆಲ್ ಸ್ಟಾರ್ ಅಂಬರೀಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಧೃವ ಸರ್ಜಾ, ಚಿರಂಜೀವಿ ಸರ್ಜಾ ಸೇರಿದಂತೆ ಇನ್ನು ಅನೇಕ ಸ್ಯಾಂಡಲ್ವುಡ್ ನ ದೊಡ್ಡ ದೊಡ್ಡ ಸ್ಟಾರ್ ಗಳು ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದರು..

ಆದರೆ ನಿನ್ನೆ ಮೈಸೂರಿನ ಲಕ್ಷ್ಮಿ ಥಿಯೇಟರ್ ನಲ್ಲಿ ಥಿಯೇಟರ್ ವಿಸಿಟ್ ಗಾಗಿ ಬಂದಂತಹ ಚಂದನ್ ಕೆಲವರ ಮೇಲೆ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದಾರೆ.. ಮೈಸೂರಿನ ಹುಡುಗ ಮೈಸೂರಿಗರ ಮುಂದೆ ಮನಬಿಚ್ಚಿ ಮಾತನಾಡಿರುವ ವೀಡಿಯೋ ಇಲ್ಲಿದೆ ನೋಡಿ..

ಕಷ್ಟ ಪಟ್ಟು ದುಡಿದು ಕಾಸು ಕೊಟ್ಟು ಸಿನಿಮಾ ನೋಡುವ ಪ್ರೇಕ್ಷಕರು ಸಿನಿಮಾದ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ನೋಡಿಕೊಂಡು ಸಿನಿಮಾ ನೋಡಿ.. ಸಿನಿಮಾ ನೋಡದೇ ಚಿತ್ರದ ಬಗ್ಗೆ ಅಪಪ್ರಚಾರ ಮಾಡುವವರ ಮಾತಿಗೆ ಕಿವಿಗೊಡಬೇಡಿ ಎಂದಿದ್ದಾರೆ..

ಲಕ್ಷ್ಮಿ ಥಿಯೇಟರ್ ಗೆ ಭೇಟಿ ಕೊಟ್ಟಾಗ ಅಲ್ಲಿನ ರೋಡ್ ಗಳು ಬ್ಲಾಕ್ ಆಗಿ ಟ್ರಾಫಿಕ್ ಜಾಮ್ ಕೂಡ ಆಗಿದ್ದು ಸಿನಿಮಾ ಹೌಸ್ಫುಲ್ ಆಗಿದ್ದು ಎದ್ದು ಕಾಣುತಿತ್ತು..

ನಿವೇದಿತಾ ಗೌಡ ಸಾಥ್..

ಮೈಸೂರಿನ ಹುಡುಗಿ ಬಿಗ್ ಬಾಸ್ ಡಾಲ್ ನಿವೇದಿತಾ ಗೌಡ ಫ್ಯಾಮಿಲಿ ಸಮೇತ ಚಿತ್ರಮಂದಿರಕ್ಕೆ ಬಂದು ಪ್ರೇಮಬರಹವನ್ನು ನೋಡಿ ಸಿನಿಮಾ ಸೂಪರ್ ಎಲ್ಲರೂ ಬಂದು ನೋಡಿ ಎಂದು ಚಂದನ್ ಗೆ ಸಾಥ್ ಕೊಟ್ಟಿದ್ದಾರೆ..

ಇಷ್ಟೇ ಅಲ್ಲದೇ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧೃವ ಸರ್ಜಾ ಚಿರು ಸರ್ಜಾ ಅರ್ಜುನ್ ಸರ್ಜಾ ರವರು ಆಂಜನೇಯನ ಹಾಡೊಂದರಲ್ಲಿ ಕಾಣಿಸಿಕೊಂಡಿರುವುದು ವಿಶೇಷವಾಗಿದೆ..

ಪ್ರೇಮ ಬರಹ ಒಂದು ನವಿರಾದ ನಿರೂಪಣೆಯುಳ್ಳ ಪ್ರೀತಿಯ ಜರ್ನಿ ಯ ಜೊತೆಗೆ ದೇಶಪ್ರೇಮವನ್ನು ಸಾರುವ ಒಂದು ಅತ್ಯದ್ಭುತ ಮನರಂಜನಾತ್ಮಕ ಸಿನಿಮಾ.. ತಪ್ಪದೇ ಹತ್ತಿರದ ಚಿತ್ರಮಂದಿರಗಳಲ್ಲಿ ಹೋಗಿ ಸಿನಿಮಾ ನೋಡಿ.. ಕನ್ನಡದ ಸಿನಿಮಾ ಬೆಳೆಯಲಿ.. 

Please follow and like us:
0
leave a comment

Leave a Reply

Your email address will not be published. Required fields are marked *

Devotional