ಮೆಟ್ರೋ ನಲ್ಲಿ ಪ್ರಯಾಣಿಸುವವರಿಗೊಂದು ಸಿಹಿ ಸುದ್ದಿ..

ಮೆಟ್ರೋ ನಲ್ಲಿ ಪ್ರಯಾಣಿಸುವವರಿಗೊಂದು ಸಿಹಿ ಸುದ್ದಿ..

ಬೆಂಗಳೂರಿನ ಟ್ರಾಫಿಕ್ ಒತ್ತಡಕ್ಕೆ ಜನರು ಮೆಟ್ರೊ ಮೇಲೆ ಅವಲಂಬಿತರಾಗಿರುವುದು ಹೊಸ ವಿಷಯವೇನಲ್ಲ..‌ ಜನಸ್ನೇಹಿಯಾಗಿರುವ ಮೆಟ್ರೊ ಇತ್ತೀಚಿನ ದಿನಗಳಲ್ಲಿ ಕೆಲಸಕ್ಕೆ ಹೋಗುವವರ ಜೀವನದ ಒಂದು ಭಾಗವಾಗಿದೆ ಎಂದರೂ ತಪ್ಪಿಲ್ಲ..

ಆದರೆ ಇಲ್ಲಿಯೂ ಜನದಟ್ಟಣೆ ಹೆಚ್ಚಾಗಿಯೇ ಇದೆ.. ಆದರೆ ಇದಕ್ಕೆಲ್ಲಾ ಸಧ್ಯದಲ್ಲೇ ಪರಿಹಾರ ಸಿಗಲಿದೆ.. ಮೆಟ್ರೋ ನಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿ ಒಂದು ಕಾದಿದೆ..

ಏನದು??

ಇಂದಿನಿಂದ 6 ಬೋಗಿಗಳ ಮೆಟ್ರೋ ಕಾರ್ಯವನ್ನು ಪ್ರಾರಂಭಿಸಲಿದೆ.. ಪ್ರಾಯೋಗಿಕವಾಗಿ ಇಂದಿನಿಂದ ಒಂದು ಟ್ರೈನ್ ಅನ್ನು ಮಾತ್ರ ಹಳಿಯಲ್ಲಿ ಬಿಟ್ಟಿದ್ದಾರೆ.. ವಿಶೇಷ ಏನಪ್ಪ ಅಂದರೆ ಇದರಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬೋಗಿಯ ವ್ಯವಸ್ಥೆ ಇದೆ..

ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ಮತ್ತು ಯಲೇಚೇನಹಳ್ಳಿಯಿಂದ ನಾಗಸಂದ್ರದವರೆಗೆ ಮೆಟ್ರೋ ಪ್ರಾಯೋಗಿಕ ಸಂಚಾರ ನಡೆಸಲಿದೆ.

ಪ್ರಾಯೋಗಿಕ ಸಂಚಾರ ಯಶಸ್ವಿಯಾದ್ರೆ ಏಪ್ರಿಲ್‍ನಿಂದ 6 ಬೋಗಿಗಳ ಮೆಟ್ರೋ ಸಂಚಾರ ಆರಂಭವಾಗಲಿದೆ.. ಇದರಿಂದ ಜನರಿಗೆ ಇನ್ನಷ್ಟು ಉಪಯೋಗವಾಗಲಿದೆ..

Please follow and like us:
0
leave a comment

Leave a Reply

Your email address will not be published. Required fields are marked *

Devotional