ಈ ಮಹಾನ್ ವ್ಯಕ್ತಿಯ ಜನ್ಮ ದಿನದಂದೇ ಫಿಕ್ಸ್ ಆಯ್ತು ಮೈಸೂರಿನ ಪುಟ್ಟ ರಾಜಕುಮಾರನ ನಾಮಕರಣ.. ಯಾರು ಈ ವ್ಯಕ್ತಿ?? ಇಲ್ಲಿದೆ ನೋಡಿ

ಈ ಮಹಾನ್ ವ್ಯಕ್ತಿಯ ಜನ್ಮ ದಿನದಂದೇ ಫಿಕ್ಸ್ ಆಯ್ತು ಮೈಸೂರಿನ ಪುಟ್ಟ ರಾಜಕುಮಾರನ ನಾಮಕರಣ.. ಯಾರು ಈ ವ್ಯಕ್ತಿ?? ಇಲ್ಲಿದೆ ನೋಡಿ

ಮೈಸೂರಿನ ಯದುವಂಶದ ಶ್ರೀ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಶ್ರೀಮತಿ ತ್ರಿಶಿಕಾ ಕುಮಾರಿಯವರಿಗೆ ಡಿಸೆಂಬರ್ 6 ರಂದು ಗಂಡು ಮಗುವಿನ ಸಂತಾನವಾಗಿದ್ದು ಎಲ್ಲರಿಗೂ ತಿಳಿದೇ ಇದೆ..

ಇದೀಗ ಆ ಪುಟ್ಟ ರಾಜಕುಮಾರನಿಗೆ ನಾಮಕರಣದ ಸಂಭ್ರಮ.. ಹೌದು ರಾಜವಂಶದ ಕುಡಿಗೆ ಮುಂದಿನ ತಿಂಗಳು ನಾಮಕರಣ ನಡೆಯಲಿದೆ ಎಂದು ತಿಳಿದುಬಂದಿದೆ.

ವಿಶೇಷವೆಂದರೆ ಶ್ರೀ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ರವರ ಜನ್ಮದಿನದಂದೇ ಪುಟ್ಟ ರಾಜಕುಮಾರನ ನಾಮಕರಣ ನಡೆಸಲು ರಾಜಮಾತೆ ಪ್ರಮೋದದೇವಿ ಒಡೆಯರ್ ರವರು ತೀರ್ಮಾನಿಸಿದ್ದಾರೆ.. ಫೆಬ್ರವರಿ 19 ರಂದು ಧಾರ್ಮಿಕ ಪೂಜಾ ವಿಧಾನಗಳು ನಡೆಯಲಿದ್ದು.. 20 ರಂದು ನಾಮಕರಣ ನಡೆಯಲಿದೆಯಂತೆ.. 1953 ಫೆಬ್ರವರಿ 20 ರಂದು ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ರವರು ಜನಿಸಿದ್ದರು..


ನಾಮಕರಣದ ಸಮಾರಂಭಕ್ಕೆ ರಾಜ ಮನೆತನದವರು.. ಹಾಗೂ ದೇಶ ವಿದೇಶಗಳಿಂದ ಅತಿಥಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.. ಜೊತೆಗೆ ಈ ಶುಭ ಸಮಾರಂಭ ಮೈಸೂರಿನ ಅರಮನೆಯಲ್ಲಿ ನಡೆಯಲಿದೆಯಂತೆ.. ಪುನರ್ವಸು ನಕ್ಷತ್ರದಲ್ಲಿ ಹುಟ್ಟಿರುವ ರಾಜವಂಶದ ಮಗುವಿಗೆ ಏನು ಹೆಸರು ಇಡುತ್ತಾರೆ ಎಂದು ಇನ್ನೂ ಎಲ್ಲೂ ತಿಳಿಸಿಲ್ಲ..

ರಾಜಮನೆತನಕ್ಕೆ ವಾರಸ್ದಾರನ ಆಗಮನವಾಗಿರುವುದು.. ಕುಟುಂಬಸ್ತರಿಗಷ್ಟೇ ಅಲ್ಲದೇ ಇಡೀ ನಾಡಿಗೇ ಸಂತೋಷವಾಗಿದೆ.. ಜೊತೆಗೆ ಶ್ರೀ ಯಧುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ತಮ್ಮ ಕುಟುಂಬದ ಮೇಲೆ ನಾಡಿನ ಜನರು ಇಟ್ಟಿರುವ ಅಭಿಮಾನಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ..

ಶೇರ್ ಮಾಡಿ.. ನಮ್ಮ ನಾಡಿಗೆ ಅಪಾರ ಕೊಡುಗೆ ಕೊಟ್ಟ ಮನೆತನವದು ಎಂದಿಗೂ ಸಂತೋಷದಿಂದಿರಲಿ ಎಂದು ಆಶಿಸೋಣ..

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News