ಕಾಣೆಯಾದ ಬುದ್ದಿಮಾಂದ್ಯ ಮಗನನ್ನು ಹುಡುಕುತ್ತಾ ಅಲೆಯುತ್ತಿದ್ದಾಳೆ ತಾಯಿ.. ಶೇರ್ ಮಾಡಿ ಯಾರಿಗಾದರೂ ಸಿಗಬಹುದು.. ಆ ತಾಯಿಗೆ ಸಹಾಯವಾಗಬಹುದು..

ಕಾಣೆಯಾದ ಬುದ್ದಿಮಾಂದ್ಯ ಮಗನನ್ನು ಹುಡುಕುತ್ತಾ ಅಲೆಯುತ್ತಿದ್ದಾಳೆ ತಾಯಿ.. ಶೇರ್ ಮಾಡಿ ಯಾರಿಗಾದರೂ ಸಿಗಬಹುದು.. ಆ ತಾಯಿಗೆ ಸಹಾಯವಾಗಬಹುದು..

ಬೆಂಗಳೂರಿನಲ್ಲೊಂದು ಕರುಣಾಜನಕ ಕಥೆ..‌ಬುದ್ದಿ ಮಾಂದ್ಯ ಮಗನನ್ನು ಕಳೆದುಕೊಂಡ ತಾಯಿಯ ಗೋಳು ಕೇಳಲಾಗದು.. ಶೇರ್ ಮಾಡಿ ಯಾರಿಗಾದರೂ ಸಿಕ್ಕರೂ ಸಿಗಬಹುದು.. ಆ ತಾಯಿಗೆ ಮಗ ಸಿಕ್ಕರೆ ನಿಮಗೊಂದಿಷ್ಟು ಪುಣ್ಯ ಲಭಿಸುವುದು..

ಮೂಲತಹ ಕೊಳ್ಳೆಗಾಲದವರಾದ ಇವರಿಗೆ 19 ವರ್ಷದ ಬುದ್ದಿಮಾಂದ್ಯ ಮಗನಿದ್ದರು ಅವರ ಹೆಸರು ಕುಮಾರಸ್ವಾಮಿ.. ಇವರಿಗೆ ಕಿವಿ ಕೇಳಿಸುತ್ತಿರಲಿಲ್ಲ..ಹಾಗೂ ಮಾತು ಬರುತ್ತಿರಲಿಲ್ಲ.. ಇವರನ್ನು ಸಮರ್ಥನಂ ಟ್ರಸ್ಟ್ ನಲ್ಲಿ ಪೋಷಕರು ಸೇರಿಸಿದ್ದರು… ಕುಮಾರಸ್ವಾಮಿ ಪ್ರತಿದಿನವೂ ಟ್ಯಾಬ್ಲೆಟ್ ತೆಗೆದುಕೊಳ್ಳಬೇಕಾಗಿತ್ತು..

ಬೆಂಗಳೂರಿನಲ್ಲಿ ಮನೆಕೆಲಸ ಮಾಡಿಕೊಂಡು ಆಗಾಗ ಟ್ರಸ್ಟ್ ಗೆ ತೆರಳಿ ಮಗನನ್ನು ನೋಡಿ ಬರುತ್ತಿದ್ದರು.. ಆದರೆ ಜನವರಿ 21 ರಂದು ಟ್ರಸ್ಟ್ ನಿಂದ ಕುಮಾರಸ್ವಾಮಿ ಕಾಣೆಯಾಗಿದ್ದಾರೆ.. ಟ್ರಸ್ಟ್ ನವರು ಒಂದೆರೆಡು ದಿನ ಹುಡುಕಿ‌ ಸುಮ್ಮನಾದರು..

ಆದರೆ ಆ ತಾಯಿ ಮಗನ ಫೋಟೊ ವನ್ನು ಹಿಡಿದುಕೊಂಡು ಬೀದಿ ಬೀದಿ ಅಲೆಯುತ್ತಿದ್ದಾಳೆ..

ಕೆಲ ದಿನಗಳ ಹಿಂದೆ ಕೋಣನಕುಂಟೆ ಬಳಿ ಕಾಣಿಸಿಕೊಂಡಿದ್ದರಂತೆ.. ಅವರನ್ನು ಕಳ್ಳ ಎಂದುಕೊಂಡು ಜನ ಥಳಿಸಿದ್ದರಂತೆ.. ಆನಂತರ ಕುಮಾರಸ್ವಾಮಿ ಎಲ್ಲಿ ಹೋದರೆಂದು ತಿಳಿದುಬಂದಿಲ್ಲ.. ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ..

ಮಾತು ಬಾರದ ಮಗ ಪ್ರತಿದಿನ ಟ್ಯಾಬ್ಲೆಟ್ ತೆಗೆದುಕೊಳ್ಳಬೇಕು.. ಜೊತೆಗೆ ಎಲ್ಲಿರುವನೋ ಯಾರದರೂ ಮತ್ತೆ ಹೊಡೆದು ಬಿಟ್ಟಿದ್ದಾರೊ ಎಂದು ಆತಂಕಗೊಂಡಿದ್ದಾರೆ ಆ ತಾಯಿ..

ನಮ್ಮ ಕೈಲಾಗುವ ಸಹಾಯವೆಂದರೆ ಈ ಪೋಸ್ಟ್ ಅನ್ನು ಶೇರ್ ಮಾಡುವುದು.. ಅಕಸ್ಮಾತ್ ಯಾರಿಗಾದರೂ ಸಿಕ್ಕರೆ ಕೂಡಲೆ HRR ಲೇಔಟ್ ಪೋಲೀಸ್ ಸ್ಟೇಷನ್ ಅಥವಾ ಚಿತ್ರದಲ್ಲಿರುವ ಟ್ರಸ್ಟ್ ಅನ್ನು ಸಂಪರ್ಕಿಸಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional