ಕೊಲೆಸ್ಟ್ರಾಲ್.. ಡಯಾಬಿಟಿಸ್.. ಗ್ಯಾಸ್ಟ್ರಿಕ್.. ಮಲಬದ್ಧತೆ ಇನ್ನು ಅನೇಕ ರೋಗಗಳಿಗೆ ರಾಮಬಾಣ ಮೆಂತ್ಯ.. ಇಲ್ಲಿದೆ ನೋಡಿ ಸಂಪೂರ್ಣ ವಿವರ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ಕೊಲೆಸ್ಟ್ರಾಲ್.. ಡಯಾಬಿಟಿಸ್.. ಗ್ಯಾಸ್ಟ್ರಿಕ್.. ಮಲಬದ್ಧತೆ ಇನ್ನು ಅನೇಕ ರೋಗಗಳಿಗೆ ರಾಮಬಾಣ ಮೆಂತ್ಯ.. ಇಲ್ಲಿದೆ ನೋಡಿ ಸಂಪೂರ್ಣ ವಿವರ.. ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ..

ಅಡುಗೆ ಮನೆಯಲ್ಲೇ ಸಿಗುವ ಮೆಂತ್ಯ ಆರೋಗ್ಯಕ್ಕೆ ಎಷ್ಟು ಉಪಯೋಗವೆಂದು ಸಾಮಾನ್ಯವಾಗಿ ಬಹಳಷ್ಟು ಮಂದಿಗೆ ತಿಳಿದಿಲ್ಲ.
ಇಲ್ಲಿದೆ ನೋಡಿ ಆರೋಗ್ಯ ಕಣಜ ಮೆಂತ್ಯೆ ಯನ್ನು ಹೇಗೆ ಬಳಸಬೇಕೆಂಬ ಮಾಹಿತಿ..

ಗ್ಯಾಸ್ಟ್ರಿಕ್

ರಾತ್ರಿ ಹೊತ್ತು ಒಂದು ಟೀ ಸ್ಪೂನ್ ಮೆಂತ್ಯೆ ಯನ್ನು ಒಂದು ಗ್ಲಾಸ್ ನೀರಿನಲ್ಲಿ ನೆನಸಿ.. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಆ ನೀರಿನ ಜೊತೆ ಮೆಂತ್ಯೆಯನ್ನು ಸೇವಿಸಿ.. ಗ್ಯಾಸ್ಟ್ರಿಕ್ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ..

ಜೀರ್ಣಕ್ರಿಯೆಗೆ ಸಹಾಯಕ..

ಮೆಂತ್ಯೆಯನ್ನು ಹುರಿದು ಪುಡಿ ಮಾಡಿ ದಿನಕ್ಕೆರೆಡು ಬಾರಿ ಅರ್ಧ ಟೀಸ್ಪೂನ್ ನಷ್ಟು.. ಹಾಲಿನ ಜೊತೆ ಸೇರಿಸಿ ಪ್ರತಿದಿನ ಕುಡಿಯುತ್ತಾ ಬನ್ನಿ.. ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ..

ತಾಯಂದಿರಿಗೆ ಬಲು ಉಪಯುಕ್ತ..

ತಾಯಿಯ ಎದೆಹಾಲನ್ನು ಹೆಚ್ಚಿಸಲು ಮೆಂತ್ಯೆ ಅತ್ಯುತ್ತಮ ವಸ್ತು.. ರಾತ್ರಿ ಹೊತ್ತು ಒಂದು ಟೀ ಸ್ಪೂನ್ ಅಷ್ಟು ಮೆಂತ್ಯವನ್ನು ನೆನಸಿ ಬೆಳಗ್ಗೆ ಅದನ್ನು ಬಿಸಿ ಹಾಲಿನ ಜೊತೆ ಸ್ವಲ್ಪ ಬೆಲ್ಲವನ್ನು ಮಿಶ್ರಣ ಮಾಡಿಕೊಂಡು ಕುಡಿಯಿರಿ.. ಮಗುವಿಗೆ ಸಾಕಾಗಿ ಮಿಗುವಷ್ಟು ಹಾಲು ಹೆಚ್ಚುತ್ತದೆ..

ಕೂದಲು ಚೆನ್ನಾಗಿ ಬೆಳೆಯಲು..

ಈಗಂತೂ ಕೂದಲು ಉದುರುವಿಕೆ ಸಮಸ್ಯೆ ಎಲ್ಲರಲ್ಲೂ ಸಾಮಾನ್ಯವಾಗಿದೆ.. ಅಂತವರು ಕೂದಲು ಉದುರುವುದು ಕಡಿಮೆ ಮಾಡಿ ಚೆನ್ನಾಗಿ ಬೆಳೆಯಲು.. ಮೆಂತ್ಯವನ್ನು ಚೆನ್ನಾಗಿ ಉರಿದು ಪುಡಿ ಮಾಡಿಕೊಂಡು.. ಸ್ನಾನಕ್ಕೂ ಮುಂಚೆ ಪೇಸ್ಟ್ ರೀತಿಯಲ್ಲಿ ಮಾಡಿಕೊಂಡು ತಲೆಗೆ ಹಚ್ಚಿ ಅರ್ಧ ಘಂಟೆ ಹಾಗೆ ಬಿಡಿ.. ನಂತರ ಸ್ನಾನ ಮಾಡಿ..
ಅಥವಾ ಇದನ್ನು ಕೊಬ್ಬರಿ ಎಣ್ಣೆಯ ಜೊತೆ ಮಿಶ್ರಣ ಮಾಡಿ ತಲೆಗೆ ಹಚ್ಚಿಕೊಂಡು ಸ್ನಾನ ಮಾಡಿ.. ಕೂದಲು ಉದುರುವುದು ಕ್ರಮೇಣ ಕಡಿಮೆಯಾಗಿ ಹೊಸ ಕೂದಲು ಕೂಡ ಹುಟ್ಟಲು ಆರಂಭವಾಗುತ್ತದೆ..

ಡಯಾಬಿಟಿಸ್..

ಡಯಾಬಿಟಿಸ್ ಇರುವವರು ಕೂಡ ಮೆಂತ್ಯೆಯನ್ನು ಚೆನ್ನಾಗಿ ಹುರಿದು ಅದನ್ನು ಪುಡಿ ಮಾಡಿ ಒಂದು ಡಬ್ಬಿಯಲ್ಲಿ ಹಾಕಿ ಇಟ್ಟುಕೊಳ್ಳಿ.. ಅದನ್ನು ದಿನಾಲು ಬೆಳಗ್ಗೆ ಸಂಜೆ ಒಂದು ಸ್ಪೂನ್ ಪೌಡರ್ ಅನ್ನು ನೀರಿನಲ್ಲಿ ಬೆರೆಸಿ ಕುಡಿಯುತ್ತಾ ಬನ್ನಿ.. ಡಯಾಬಿಟಿಸ್ ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ.. ಜೊತೆಗೆ ಸಕ್ಕರೆ ಖಾಯಿಲೆ ಇರುವವರಿಗೆ ಆಗುವ ಸುಸ್ತನ್ನೂ ಕೂಡ ಕಡಿಮೆ ಮಾಡುತ್ತದೆ..

ಕಾನ್ಸ್ಟಿಪೇಷನ್ ತೊಂದರೆ..

ಹೊಟ್ಟೆ ಕಟ್ಟಿ ಬೆಳಗ್ಗೆ ಟಾಯ್ಲೆಟ್ ಮಾಡಲು ತೊಂದರೆ ಅನುಭವಿಸುವವರು.. ಪ್ರತಿದಿನ 1/2 ಸ್ಪೂನ್ ಹುರಿದ ಮೆಂತ್ಯೆಯ ಪುಡಿಯನ್ನು ನೀರಿನಲ್ಲಿ ಬೆರೆಸಿ ಕುಡಿಯಿರಿ.. ನೆಮ್ಮದಿಯಿಂದ ಟಾಯ್ಲೆಟ್ ನಿಂದ ಹೊರಬರಬಹುದು..

ಕೊಲೆಸ್ಟ್ರಾಲ್ ತೊಂದರೆ

ಕೊಲೆಸ್ಟ್ರಾಲ್ ಸಮಸ್ಯೆ ಇರುವವರು ಪ್ರತಿ ದಿನ ಅರ್ಧ ಸ್ಪೂನ್ ಹುರಿದ ಮೆಂತ್ಯೆದ ಪುಡಿಯನ್ನು ಬಿಸಿನೀರಿನಲ್ಲಿ ಹಾಕಿ ಕುಡಿಯಿರಿ.. ಅಥವಾ ಮಜ್ಜಿಗೆ ಯಲ್ಲಿ ಹಾಕಿ ಕುಡಿಯಿರಿ.. ಹೀಗೆ ಮಾಡುವುದರಿಂದ ಕೊಲೆಸ್ಟ್ರಾಲ್ ಬರ್ನ್ ಆಗುವುದು..

ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ ಇತರರಿಗೂ ಉಪಯೋಗವಾಗಲಿ..

Please follow and like us:
0
leave a comment

Leave a Reply

Your email address will not be published. Required fields are marked *

Devotional