ದೈವ ಪೂಜಾರಿ ಪೈಲಟ್ ಆದಾಗ..!! ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ…

ನಾವು ಎಷ್ಟೇ ಓದಿದ್ದರೂ ಕೂಡ ನಮ್ಮ‌ ನಂಬಿಕೆ ನಮ್ಮಿಂದ ಹೋಗಲು ಸಾಧ್ಯವಿಲ್ಲ ಎನ್ನುವುದಕ್ಕೆ ಮಂಗಳೂರಿನ ಈ ಯುವಕನೇ ಸಾಕ್ಷಿ.

ಈಸ್ಟ್ ಸೌತ್ ಆಫ್ರಿಕಾದ ಆರಿಕ್ ಏರ್ ವಿಮಾನ ಸಂಸ್ಥೆಯಲ್ಲಿ ಪೈಲೆಟ್ ಆಗಿರುವ ಎಳತ್ತೂರಿನ ಸಮೀಪದ ಕಾಂತೆಬಾರೆ, ಬೂದಾಬಾರೆಯ 29 ವರ್ಷಪ್ರಾಯದ ಮನೋಜ್ ಪೂಜಾರಿಯವರು ದೈವದ ಪಾತ್ರಿಯಾಗಿದ್ದಾರೆ.

ಮೂಲ್ಕಿಯ ನಾರಾಯಣ ಗುರು ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಪ್ರಾಥಮಿಕ, ವಿಜಯ ಕಾಲೇಜಿನಲ್ಲಿ ಪಿಯುಸಿ‌ ಕಲಿತು, ಡೆಹ್ರಾಡೂನ್ ನಲ್ಲಿ ಎಎಂಇ ಕಲಿತ ಮನೋಜ್ ಪೂಜಾರಿ ಅನಿವಾರ್ಯವಾಗಿ ಗರಡಿಯಲ್ಲಿ ದೇವರ ಪೂಜೆಯಲ್ಲಿ ತೊಡಗುವಂತಾಯಿತು.

 

 

 

2003 ರಲ್ಲಿ ದೈವದ ಪೂಜೆಗೆ ತೊಡಗುವವರೆಗೂ ಅವರು ಕೋಲಗಳನ್ನು ನೋಡಿರಲೇ ಇಲ್ಲವಂತೆ. ಆದರೆ‌ 2004ರಲ್ಲಿ ಎಳತ್ತೂರು ಮಜಲಗುತ್ತುವಿನ ಜಾರಂದಾಯ ದೈವದ ಮೊಗ ಹಿಡಿಯುವ ಕಾಯಕವನ್ನು ಮಾಡಬೇಕಾಗಿ ಬಂತು.

ನಂತರ ಇವರ ಕುಟುಂಬದವರು ನಂಬಿಕೊಂಡು ಬಂದ ಕಾಂತಾಬಾರೆ, ಬೂದಾಬಾರೆ ಕ್ಷೇತ್ರಗಳಿಗೆ ಸಂಬಂಧಿಸಿದ ಆದಿಕಲ್ಲಾಡಿ, ನಡುಮಾನಾಡಿ ಪುರುಪು ಗುಡ್ಡೆ ಸ್ಥಾನಗಳಲ್ಲಿ ಇರುವ ಗುಡ್ಡೆ ಧೂಮಾವತಿ ದೈವದ ಸೇವೆಗೆ ಸಮರ್ಪಿತವಾದ ಮನೋಜ್ ರವರು ಮಾ19 ರಂದು ನಡೆದ ತುಡುರಬಲಿ ದೈವದ ಪಾತ್ರಿಗಳಾಗಿದ್ದರು. ಮಾಚ್೯ 6 ರಂದು ಮಾನಾಡಿಯ ದೈವ ಪಾತ್ರಿಯಾಗಿದ್ದ ಯಾದವ ಪೂಜಾರಿಯವರಿಂದ ಆರಾಧನಾ ಕ್ರಮವನ್ನು ಕಲಿತು ದೈವ ಪೂಜೆಯನ್ನು ನೆರವೇರಿಸಿದ್ದಾರೆ.

 

 

 

 

2008 ರಲ್ಲಿ ಪೈಲೆಟ್ ಆಗಲು ತರಬೇತಿಗೆ ಸೇರುವುದರ ಮೂಲಕ 2010 ರಲ್ಲಿ ಲೈಸೆನ್ಸ್ ಸಿಕ್ಕಿ ಪೈಲೆಟ್ ಆಗಿ, ಈಸ್ಟ್ ಆಫ್ರಿಕಾದಲ್ಲಿ ಪೈಲೆಟ್ ವೃತ್ತಿ ಆರಂಭಿಸಿ ,ತಾಂಜಾನಿಯ, ಉಗಾಂಡಾ, ಕಾಂಗೊ ಮುಂತಾದ ದೇಶಗಳಲ್ಲಿ ಸುತ್ತಾಡುವ ಆರಿಕ್ ಏರ್ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇದಕ್ಕೂ ಮೊದಲು ಜ್ಯೂಬಾ ಕಂಪನಿಯಲ್ಲಿ ಪೈಲೆಟ್ ಆಗಿದ್ದರು.

ಇದೆಲ್ಲಾ ನಿಮ್ಮಿಂದ ಹೇಗೆ ಸಾಧ್ಯವಾಯಿತು ಎಂದು ಕೇಳಿದರೆ, ಎಳತ್ತೂರು ದೇವಸ್ಥಾನದಲ್ಲಿ ದೈವದ ಮೊಗ ಹಿಡಿಯುವ ಸಂದರ್ಭದಲ್ಲಿ ಮೈಯೊಳಗೆ ದೈವ ಪ್ರವೇಶಿಸಿದ ಸಂದರ್ಭದಲ್ಲಿ ಮೈಯಲ್ಲಿ ಕರೆಂಟ್ ಪಾಸಾದ ಹಾಗೇ ಆಯಿತು. ನಂತರ ನನ್ನ ದೇಹದಲ್ಲಿ ಏನಾಯಿತೆಂದು ನನಗೆ ಗೊತ್ತಾಗಲೇ ಇಲ್ಲ. ಇದೊಂದು ಅವಿಸ್ಮರಣೀಯ ಅನುಭವವಾಗಿತ್ತು ಎಂದು ಹೇಳಿದ್ದಾರೆ.

ಮುಂದಿನ ಶನಿವಾರ ಕಾಂತಾಬಾರೆ, ಬೂದಾಬಾರೆ ದೇವಸ್ಥಾನದಲ್ಲಿ ನಡೆಯಲಿರುವ ಗುಡ್ಡೆ ಜಮಾದಿಯ ದೈವಪಾತ್ರಿಯಾಗಿ ಸೇವೆ ಸಲ್ಲಿಸಲಿದ್ದಾರೆ.

 

 

 

ಮನೋಜ್ ರವರ ಈ ನಂಬಿಕೆಯು ಶಾಶ್ವತವಾಗಿರಲಿ ಮತ್ತು ಅವರನ್ನು ದೈವವೂ ಯಾವಾಗಲೂ ಕಾಪಾಡುತ್ತಿರಲಿ ಎಂದು ಹಾರೈಸೋಣ?

Please follow and like us:
0
leave a comment

Leave a Reply

Your email address will not be published. Required fields are marked *

Devotional