ಮಲೆ ಮಹದೇಶ್ವರ ಮತ್ತು ಬೆಟ್ಟದ ವೈಶಿಷ್ಟ್ಯಗಳು..!!

ಮಲೆ ಮಹದೇಶ್ವರ ಬೆಟ್ಟವು ಅಮೂಲ್ಯ ಸಸ್ಯರಾಶಿ, ಜೀವರಾಶಿಗಳಿಂದ ಕೂಡಿದ ಸುಂದರವಾದ ಕಾನನ ಪ್ರದೇಶವಾಗಿದ್ದು, ಇಲ್ಲಿ ಬಿಸಿಲಿನ ಕಿರಣಗಳು ಭೂಮಿಗೆ ತಾಕುವುದೇ ಇಲ್ಲ.

ಮಲೆ ಮಹದೇಶ್ವರ ಬೆಟ್ಟವನ್ನು ಮಾದೇಶನ ಬೆಟ್ಟ, ಮಹದೇಶ್ವರ ಗಿರಿ ಮತ್ತು ಎಂ.ಎಂ.ಹಿಲ್ಸ್ ಎಂದೂ ಕೂಡ ಕರೆಯುತ್ತಾರೆ.

ಕೊಳ್ಳೆಗಾಲದ ಪೂರ್ವ ದಿಕ್ಕಿಗೆ ಇರೋ ಈ ಪ್ರದೇಶ ಒಂದು ಪವಿತ್ರ ಯಾತ್ರಾ ಸ್ಥಳವಾಗಿದ್ದು, ಪ್ರಕೃತಿ ಪ್ರಿಯರನ್ನು ಆಕರ್ಷಿಸುವ ಸುಂದರ ತಾಣವಾಗಿದೆ. ಈ ಮೊದಲು ಇಲ್ಲಿ ಕಾಡುಗಳ್ಳ ವೀರಪ್ಪನ್ ಇಲ್ಲಿಯೇ ವಾಸವಾಗಿದ್ದ ಎಂದು ಜನರು ಈ ಕಡೆ ಬರುವುದಕ್ಕೆ ಭಯಪಡುತ್ತಿದ್ದರು.

ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ಯಾತ್ರಾರ್ಥಿಗಳು ತಿಳಿದುಕೊಳ್ಳಬೇಕಾದ ವಿಷಯಗಳು:-

 

 

1. ಮಲೆಮಹದೇಶ್ವರ ಬೆಟ್ಟವನ್ನು ಏರುವುದು ಸುಲಭವಾಗಿರದೇ, ಈ ಮಲೆಯ ದಾರಿಯು ಹಾವು ತೆವಳಿದಂತೆ ಇದೆ ಎಂಬ ಕಾರಣಕ್ಕೆ ಸರ್ಪದ ದಾರಿ, ಬಸವನ ದಾರಿ ಎಂದು ಕರೆಯುತ್ತಾರೆ.

2. ಪುರಾಣದ ಪ್ರಕಾರ ಈ ಮಲೆಗೆ ನಾನಾ ಹೆಸರುಗಳಿಂದ ಕರೆಯುತ್ತಾರೆ. ಅದೇನೆಂದರೆ, ಆನೆಮಲೆ, ಕಾನುಮಲೆ, ಜೇನುಮಲೆ, ಪಷೆಮಲೆ, ಪಹಳಮಲೆ, ಪೊನ್ನಾಚಿಮಲೆ ಮತ್ತು ಕೂಗು ಮಲೆ ಎಂಬ 77 ಮಲೆಗಳು ಇಲ್ಲಿವೆ.

3. ಮಹಾನ್ ಮಹಿಮ ಪುರುಷ ಇಲ್ಲಿ ನೆಲೆಸಿದ್ದು, ಈ ಮಹದೇಶ್ವರ ಬೆಟ್ಟವು ಶಿವನ ದೇವಸ್ಥಾನವಾಗಿದ್ದು, ಕರ್ನಾಟಕ ಮಾತ್ರವಲ್ಲದೇ ಹೊರರಾಜ್ಯಗಳಿಂದಲೂ ಜನರನ್ನು ಆಕರ್ಷಿಸುತ್ತಿದೆ.

 

 

 

 

4. 600 ವರ್ಷಗಳ ಹಿಂದೆ ಒಬ್ಬ ಮಹಾನ್ ಮಹಿಮ ಪುರುಷನು ಇಲ್ಲಿಗೆ ಬಂದು ಸುದೀರ್ಘ ತಪ್ಪಸ್ಸನ್ನು ಆಚರಿಸಿ, ಶಕ್ತಿಯನ್ನು ಪಡೆದು ಜನರ ಕಷ್ಟಗಳನ್ನು ಪರಿಹರಿಸಿ ಲಿಂಗ ರೂಪವನ್ನು ಪಡೆದನು ಎಂದು‌ ಜಾನಪದ ಕತೆಯಲ್ಲಿದೆ. ಕಷ್ಟವೆಂದು ಬರುವ ಭಕ್ತರ ಕಷ್ಟಗಳನ್ನು ಪರಿಹರಿಸಿ ಭಕ್ತೋದ್ಧಾರಕನೆಂದು ಕರೆಯಲಾಗುತ್ತದೆ.

5. ಭಕ್ತರಿಗೆ ಸಕಲ ಐಶ್ವರ್ಯವನ್ನು ನೀಡಿ ತನ್ನ ಭಕ್ತರನ್ನು ಪರೀಕ್ಷಿಸುವ ಸಲುವಾಗಿ ಜಂಗಮ ವೇಷದಲ್ಲಿ ಭಿಕ್ಷೆ ಬೇಡಲು ಹೋಗುತ್ತಾನೆ. ಭಕ್ತರು ಭಿಕ್ಷೆ ನೀಡದೇ ಅವಮಾನಿಸಿದರೆ ಅವರ ಮೇಲೆ ಕೆಂಡಾಮಂಡಲನಾಗಿ ಅವರನ್ನು ನಾಶ ಮಾಡುತ್ತಾನೆ. ಒಂದು ವೇಳೆ ಭಕ್ತರು ಧರ್ಮಪ್ರಿಯರು, ಉತ್ತಮ ನಡವಳಿಕೆಯನ್ನು ಹೊಂದಿದವರು ಆಗಿದ್ದರೇ, ಅವರನ್ನು ಬದುಕಿಸುತ್ತಾನೆಂಬ ಹಲವು ಕತೆಗಳಿವೆ.

6. ಇವರು ಹಾಡುವಾಗ ಮಹದೇಶ್ವರ ಮಹಾತ್ಮೆಯಲ್ಲಿ ಬರುವ ಸಂಕಮ್ಮನ ಸಾಲುಗಳನ್ನು ಹಾಡುವುದೇ ಇಲ್ಲವಂತೆ. ಮಹದೇಶ್ವರನ ಐತಿಹಾಸಿಕ ಹಾಡನ್ನು ಅಷ್ಟೇ ಹಾಡುತ್ತಾರಂತೆ.

 

 

7. ಮಲೆ ಮಹದೇಶ್ವರನ ಮಹಿಮೆಗಳ ಜಾನಪದ ಕಾವ್ಯವು ಪ್ರಪಂಚದ ಅತಿದೊಡ್ಡ ಜನಪದ ಕಾವ್ಯಗಳಲ್ಲಿ ಎರಡನೆಯ ಸ್ಥಾನ ಪಡೆದುಕೊಂಡಿದೆ.

8. ಇಲ್ಲಿಗೆ ಹೋಗಲು ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗದಲ್ಲಿರುವ ಈ ಬೆಟ್ಟವು 50 ಕಿಲೋ ಮೀಟರ್, ಮೈಸೂರಿನಿಂದ 150 ಕಿಲೋ ಮೀಟರ್ ದೂರದಲ್ಲಿದೆ. ಇಲ್ಲಿಗೆ ಹೋಗಲು ಬಸ್ಸ್, ರೈಲು ಮತ್ತು ವಾಯು ಸಾರಿಗೆ ವ್ಯವಸ್ಥೆ ಇದೆ.

ಇಷ್ಟೆಲ್ಲಾ ಅನುಕೂಲವಿರುವ, ಇಷ್ಟೊಂದು ಸುಂದರ ಮತ್ತು ಮಹಿಮೆಯನ್ನು ಹೊಂದಿದ ಈ ತಾಣಕ್ಕೆ ಒಮ್ಮೆ ಭೇಟಿಕೊಟ್ಟು ನೋಡಿ, ಮನಸ್ಸು ಮತ್ತು ದೇಹಗಳೆರಡಕ್ಕೂ ನವ ಉಲ್ಲಾಸ ಸಿಗುವುದರಲ್ಲಿ ಸಂಶಯವಿಲ್ಲ.

Please follow and like us:
0
leave a comment

Leave a Reply

Your email address will not be published. Required fields are marked *

Devotional