ಮನೆಯಲ್ಲೇ ಕೂತು ಮೊಬೈಲ್ ಮೂಲಕ ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ?? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಎಂದರೇ ಒಂದು ತಲೆ ನೋವಿನ ಕೆಲಸವೇ ಸರಿ.. ಆದರೇ ಮನೆಯಲ್ಲೇ ಕೂತು ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸಬಹುದು.. ಯಾವುದೇ ಲಂಚ ಕೊಡಬೇಕಿಲ್ಲಾ.. ಎಲ್ಲೂ ಅಲೆಯಬೇಕಿಲ್ಲಾ.. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..


ಇದಕ್ಕೆ ಬೇಕಾಗುವ ದಾಖಲಾತಿಗಳು..
Sslc ಮಾರ್ಕ್ಸ್ ಕಾರ್ಡ್ ಅಥವಾ ವಯಸ್ಸಿನ ಧೃಡೀಕರಿಸುವ ಒಂದು ದಾಖಲಾತಿ
ಮನೆಯ ಅಡ್ರೆಸ್ಸ್ ನ ಮಾಹಿತಿ..
ಇವೆರೆಡು ದಾಖಲಾತಿ ಇದ್ದರೆ ಸಾಕು ನೀವು ಸುಲಭವಾಗಿ ಲೈಸೆನ್ಸ್ ಮಾಡಿಸಬಹುದು..


ಮನೆಯಲ್ಲೇ ಕೂತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು.. ಆದರೆ ಹೇಗೆ ಪಡೆಯುವುದು ಅರ್ಜಿ ಸಲ್ಲಿಸುವುದಾದರೂ ಎಲ್ಲಿ?? ಇಲ್ಲಿದೆ ನೋಡಿ..
ಮೊದಲು ನಾವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು..
ಈ ಕೆಳಗಿನ ಲಿಂಕ್ ಮೂಲಕ ನೀವು RTO ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ..
http://www.RTO.kar.nic.in ಇಲ್ಲಿ ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಮಾಹಿತಿ ದೊರೆಯಲಿದೆ.. ನಿಮಗೆ ಯಾವ ಭಾಷೆ ಅನುಕೂಲವಾಗುವುದೋ ಆ ಭಾಷೆಯಲ್ಲಿ ಮುಂದುವರೆಯಿರಿ..


ನಾವು ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕಾದರೆ ಮೊದಲು LLR ಅಂದರೆ ಕಲಿಕಾ ಪರವಾನಗಿ ಪತ್ರವನ್ನು ಪಡೆಯಬೇಕು.. ಅದಕ್ಕಾಗಿ ಮೊದಲು LLR ಗೆ ಅರ್ಜಿಯನ್ನು ಸಲ್ಲಿಸಿ.. http://www.RTO.kar.nic.in ಲಿಂಕ್ ಮೂಲಕ ಹೋಗಿ ಅಲ್ಲಿ ಕಲಿಕಾ/ಚಾಲನಾ ಅನುಜ಼್ನಾ ಪತ್ರ/ವಾಹನ ನೋಂದಣಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ..

ಅದರಲ್ಲಿ ಕೆಲವು ಮಾಹಿತಿಯನ್ನು ನೀಡಿ ನಿಮ್ಮ RTO ಕೇಂದ್ರವನ್ನು ಆಯ್ಕೆ ಮಾಡಿಕೊಂಡು ಅರ್ಜಿಯನ್ನು ತುಂಬಿ..
ಅಲ್ಲಿ LLR ಬೇಕಿದ್ದರೆ New learner licence ಆಪ್ಶನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ.. ನಿಮ್ಮ ಬಳಿ ಈಗಾಗಲೇ LLR ಇದ್ದರೆ DL ಪಡೆದುಕೊಳ್ಳುವುದಕ್ಕಾಗಿ New driving license ಆಪ್ಶನ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಿ..


ಅಲ್ಲಿ ನಿಮ್ಮ ಕೆಲವು ಮಾಹಿತಿಯನ್ನು ಕೇಳಲಾಗುತ್ತದೆ..
ಹೆಸರು
RTO ನಂಬರ್(ಕೆಳಗಿನ ಚಿತ್ರದಲ್ಲಿ ನೀಡಲಾಗಿದೆ)
ಆಧಾರ್ ನಂಬರ್
ಮೊಬೈಲ್ ನಂಬರ್
ಇನ್ನು ಕೆಲವು ಮಾಹಿತಿಗಳನ್ನು ನೀಡಿ ಅರ್ಜಿ ತುಂಬಿರಿ..


ಅಲ್ಲಿ ನಿಮ್ಮ ಅಡ್ರೆಸ್ಸ್ ಅನ್ನು ಕೇಳಲಾಗುತ್ತದೆ.. ಅಲ್ಲಿಗೆ ನಿಮ್ಮ ಅಡ್ರೆಸ್ಸ್ ಅನ್ನು ನೀಡಿ.. DL ಮೇಲೆ ಬರಬೇಕಾದ ಅಡ್ರೆಸ್ಸ್ ಅನ್ನು ಸರಿಯಾಗಿ ನೀಡಿ.. ಇದನ್ನು ಮುಂದೆ ಅಡ್ರೆಸ್ಸ್ ಪ್ರೂಫ್ ಆಗಿ ಬಳಸಬಹುದು..
ಈಗ ನೀವು ಯಾವ ವಾಹನಕ್ಕೆ ಪರವಾನಗಿ ಕೇಳುತ್ತಿದ್ದೀರಾ ಎಂದು ಭರ್ತಿ ಮಾಡಿ..
ದ್ವಿಚಕ್ರ.. ಅಥವಾ ನಾಲ್ಕು ಚಕ್ರ.. ಅಥವ ಹೆವಿ ವೆಹಿಕಲ್.. ಅಲ್ಲಿ ನೀಡುವ ಆಯ್ಕಗಳನ್ನು ಸರಿಯಾಗಿ ನೋಡಿ ಭರ್ತಿ ಮಾಡಿ..


ಇದಾದ ನಂತರ ಅಲ್ಲಿ ದಾಖಲಾತಿಗಳನ್ನು ಅಪ್ ಲೋಡ್ ಮಾಡಲು ಕೇಳುತ್ತದೆ..
ನೀವು ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿಸಿಕೊಳ್ಳಿ.. ಅದನ್ನು ಇಲ್ಲಿ ಅಪ್ ಲೋಡ್ ಮಾಡಿ.. ಇಲ್ಲಿಗೆ ಅರ್ಜಿ ಭರ್ತಿ ಮಾಡುವ ಕೆಲಸ ಮುಗಿಯುತ್ತದೆ.. ನಂತರ ಸಲ್ಲಿಸಿದ ಅರ್ಜಿಯನ್ನು ಒಂದು ಪ್ರಿಂಟ್ ಔಟ್ ತೆಗೆದುಕೊಂಡು ಇಟ್ಟುಕೊಳ್ಳಿ..
LLR ಪಡೆಯುವುದು
ನಂತರ ಭರ್ತಿ ಮಾಡಿದ ಅರ್ಜಿಯನ್ನು RTO ಆಫೀಸಿಗೆ ನೀಡಿ ನಿಗದಿತ ಶುಲ್ಕವನ್ನು ಕಟ್ಟಿ.. ನಂತರ ಅವರು LLR ಪಡೆಯಲು ಒಂದು ಪರೀಕ್ಷೆಯನ್ನು ನಿಮಗೆ ನೀಡುತ್ತಾರೆ.. ಆ ಪರೀಕ್ಷೆಯಲ್ಲಿ ನಿಮಗೆ ಬರವಣಿಗೆಯ ಮೂಲಕ ಪ್ರಶ್ನೆಗಳನ್ನು ಕೇಳುತ್ತಾರೆ.. ಅಂದರೆ ವಾಹನ ಚಲಾಯಿಸಲು ಬೇಕಾದ ಸಾಮಾನ್ಯ ಜ್ನಾನ.. ರೋಡ್ ಸಿಗ್ನಲ್ ಹಾಗೂ ಇನ್ನಿತರ ಸುಲಭ ಪ್ರಶ್ನೆಗಳನ್ನು ಕೇಳುತ್ತಾರೆ.. ಅದಕ್ಕೆಲ್ಲಾ ಉತ್ತರಿಸಿ.. LLR ಪಡೆಯಿರಿ..


DL ಪಡೆಯುವುದು
DL ಪಡೆಯುವುದಕ್ಕೆ ಒಂದು ದಿನ ನಿಗದಿ ಮಾಡಿ.. ಆ ದಿನ ನಿಮಗೆ ವಾಹನ ಚಲಾಯಿಸಲು ಪರೀಕ್ಷೆಯನ್ನು ನೀಡುತ್ತಾರೆ.. ಅಲ್ಲಿ ನೀವು ಸರಾಗವಾಗಿ ರೂಲ್ಸ್ ಫಾಲೋ ಮಾಡಿಕೊಂಡು ವಾಹನ ಚಲಾಯಿಸಬೇಕಿದೆ.. ಇದರಲ್ಲಿ ತೇರ್ಗಡೆಯಾದರೆ ನಿಮಗೆ DL ಸಿಗಲಿದೆ..
ಶೇರ್ ಮಾಡಿ ಇತರರಿಗೂ ಉಪಯೋಗವಾಗಲಿ…

Please follow and like us:
0
leave a comment

Leave a Reply

Your email address will not be published. Required fields are marked *

Devotional
Health News