ಕೂದಲುದುರುವಿಕೆ ಸಮಸ್ಯೆಯಿಂದ ಪಾರಾಗಲು ಇಲ್ಲಿದೆ ಸುಲಭ ವಿಧಾನ: ಆಕ್ಯುಪ್ರೆಶರ್!!

ಇಂದಿನ ಯುವಜನತೆಯಲ್ಲಿ ಕೂದಲಿನ ಸಮಸ್ಯೆ ಸರ್ವೆ ಸಾಮಾನ್ಯವಾಗಿ ಹೋಗಿದೆ. ಕಾರಣ ಹಲವಾರು; ಇಂದಿನ ಒತ್ತಡದ ಜೀವನ, ಸತ್ವರಹಿತ ಆಹಾರ ಪದ್ಧತಿ, ಮಲಿನಯುತ ಪರಿಸರ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

 

ಅದೇನೇ ಇರಲಿ, ಒಟ್ಟಿನಲ್ಲಿ ತಮ್ಮ ಕೇಶ ಸೌಂದರ್ಯಕ್ಕಾಗಿ ಜನ ಇನ್ನಿಲ್ಲದಂತೆ ಒದ್ದಾಡುತ್ತಿರುವುದಂತೂ ಸಾರ್ವತ್ರಿಕ ಸತ್ಯ.

ಆದರೆ, ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಆಕ್ಯುಪ್ರೆಶರ್ ಚಿಕಿತ್ಸೆ ಒಂದು ಸುಲಭ ಉಪಾಯೋಗಕಾರಿ ಮಾದರಿಯಾಗಿದೆ. ಈ ಚಿಕಿತ್ಸೆಯು ಹಿಂದಿನ ಕಾಲದಿಂದಲೂ ಇದ್ದು,‌ ನಮ್ಮ ಹಿರಿಯರು ಈ ಚಿಕಿತ್ಸೆಯನ್ನು ಮಾಡಿಕೊಳ್ಳುತ್ತಿದ್ದರು.

 

 

 

 

 

ಇದನ್ನು‌ ಮಾಡುವ ವಿಧಾನ ಹೀಗಿದೆ:-

ನಮ್ಮ ಎರಡು ಕೈ ಬೆರಳುಗಳನ್ನು ಸೇರಿಸಿ ಉಜ್ಜಿದರೆ ಆಕ್ಯುಪ್ರೆಶರ್ ಪಾಯಿಂಟ್ ಸಕ್ರಿಯಗೊಂಡು ಬಕ್ಕತಲೆ ಕಡಿಮೆಯಾಗಿ ಕೂದಲು ಉದುರುವುದು ಮತ್ತು ಬೆಳ್ಳಗಾಗುವುದು ಕಡಿಮೆಯಾಗಿ ಕೂದಲು ಆರೋಗ್ಯಕಾರಿಯಾಗಿ ಬೆಳೆಯುತ್ತದೆ.

ಎರಡರಿಂದ ಮೂರುಸಲ 10 ರಿಂದ 20 ನಿಮಿಷಗಳ ಕಾಲ ಎರಡೂ ಕೈ ಬೆರಳುಗಳ ಉಗುರುಗಳನ್ನು ಒಂದಕ್ಕೊಂದು ತಿಕ್ಕಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಆದರೆ ಇದರಲ್ಲಿ ಹೆಬ್ಬೆರಳನ್ನು ಹೊರತುಪಡಿಸಿ ಉಳಿದ ನಾಲ್ಕು ಬೆರಳನ್ನು ಮಾತ್ರ ಉಜ್ಜಬೇಕು. ಹೆಬ್ಬೆರಳನ್ನು ಸೇರಿಸಿ ಉಜ್ಜಿದರೆ ಮುಖದ ಮೇಲೆ ಕೂದಲು ಹೆಚ್ಚಾಗುತ್ತದೆ.

 

 

ಈ ಚಿಕಿತ್ಸೆಯಿಂದ ಕೂದಲಿನ ಬುಡದಲ್ಲಿ ರಕ್ತಸಂಚಲನೆ ಹೆಚ್ಚಾಗಿ ಕೂದಲಿನ ಕೋಶಗಳು ಬಲಿಷ್ಟ ಮಾಡುವುದರ ಜೊತೆಗೆ ಕೂದಲು ಉದುರುವುದು ಮತ್ತು ಬೆಳ್ಳಗಾಗುವುದು ತಡೆಯುತ್ತದೆ.

ಕೂದಲು ಉದುರುವುದು ಕಡಿಮೆಯಾಗಲು 3 ರಿಂದ 6 ತಿಂಗಳು ಬೇಕಾಗುತ್ತದೆ. ಹಾಗೇಯೇ ಕೂದಲು ಬೆಳೆಯಲು 6 ರಿಂದ 9 ತಿಂಗಳು ಬೇಕಾಗುತ್ತದೆ. ಇದರಲ್ಲಿ ನಾವು ಕೈ ಬೆರಳನ್ನು ದಿನಕ್ಕೆ ಎಷ್ಟು ಸಲ ಉಜ್ಜುತ್ತೇವೆ ಎನ್ನುವುದರ ಮೇಲೆ ನಿರ್ಧಾರವಾಗಿರುತ್ತದೆ.

 

 

 

 

ಈ ಆಕ್ಯುಪ್ರೆಶರ್ ಚಿಕಿತ್ಸೆಯನ್ನು ಅಧಿಕ ರಕ್ತದೊತ್ತಡ ಇರುವವರು ‌ಮತ್ತು ಗರ್ಭಿಣಿ ಮಹಿಳೆಯರು ಅಪ್ಪಿತಪ್ಪಿಯೂ ಮಾಡಬಾರದು.

Please follow and like us:
0
leave a comment

Leave a Reply

Your email address will not be published. Required fields are marked *

Devotional