ಕನ್ನಡಿಗರ ಪರ ಹೇಳಿಕೆ ನೀಡಿದ ಕ್ಯಾಪ್ಟನ್ ಕೂಲ್‌ ಎಂ.ಎಸ್.ಡಿ !! ಮಾಹಿತಿ ಇಲ್ಲಿದೆ‌‌ ನೋಡಿ…ಓದಿ ಶೇರ್ ಮಾಡಿ …

ಮಹೇಂದ್ರ ಸಿಂಗ್ ಧೋನಿ‌ ಈ ಹೆಸರು ಕೇಳಿದಾಕ್ಷಣ ಕ್ರಿಕೆಟ್ ಪ್ರೇಮಿಗಳಲ್ಲಿ ಏನೋ ಒಂದು ಉತ್ಸಾಹ. ಭಾರತೀಯ ಕ್ರಿಕೆಟ್ ರಂಗದಲ್ಲಿ ಯಶಸ್ವಿ ನಾಯಕನೆಂದೇ ಗುರುತಿಸಿಕೊಂಡ ಇವರು ಅಭಿಮಾನಿಗಳ ನೆಚ್ಚಿನ ಕ್ಯಾಪ್ಟನ್ ಕೂಲ್‌. ಭಾರತಕ್ಕೆ ಎರಡು ವಿಶ್ವ ಕಪ್‌ ಗೆದ್ದು ಕೊಟ್ಟ ಭಾರತದ ಶ್ರೇಷ್ಠ ನಾಯಕ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಷ್ಟೇ ಅಲ್ಲದೆ ಐಪಿಎಲ್ ನಲ್ಲೂ ಇವರು ಯಶಸ್ವಿ ನಾಯಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

ಆಕರ್ಷಕ ಹೊಡೆತಗಳ ಮೂಲಕ ಅಭಿಮಾನಿಗಳನ್ನು ರಂಜಿಸುವ ನಮ್ಮ‌ ಎಮ್.ಎಸ್.ಧೋನಿ ಐಪಿಎಲ್‌ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನ‌ ಯಶಸ್ವಿ ನಾಯಕರೂ‌ ಹೌದು. ಇನ್ನು ಇವರು ಚೆನ್ನೈ ತಂಡದ ಪರವಾಗಿ ಆಡುವುದನ್ನು ಕನ್ನಡಿಗರು ವಿರೋಧಿಸಿದ್ದಾರೆ. ಆದರೆ ಸತ್ಯ ಸಂಗತಿ‌ ಏನೆಂಬುದನ್ನು‌ ತಿಳಿದುಕೊಂಡರೆ ಎಲ್ಲಾ ಕನ್ನಡಿಗರೂ ನಮ್ಮ ಧೋನಿಯವರನ್ನು ಗೌರವದಿಂದ ಕಾಣುವುದಂತೂ ಸುಳ್ಳಲ್ಲ.

ಬಹಳ‌ ವರ್ಷಗಳಿಂದ ಕಾವೇರಿ ನೀರಿನ‌ ಸಲುವಾಗಿ ಕರ್ನಾಟಕ ಮತ್ತು ತಮಿಳುನಾಡಿನ ಮಧ್ಯೆ ಮನಸ್ತಾಪ‌ ಇರುವುದು ಗೊತ್ತಿರುವ ಸಂಗತಿ. ಇನ್ನು‌ ಮೊನ್ನೆಯಷ್ಟೇ ತಮಿಳುನಾಡಿನಾದ್ಯಂತ ಕಾವೇರಿ ಗಲಾಟೆ ಆಗಿರುವುದು ತಿಳಿದಿದೆ. ಇನ್ನು ತಮಿಳುನಾಡಿನಲ್ಲಿ ಈ‌ ಗದ್ದಲದಿಂದ ಐಪಿಎಲ್ ನ‌ ಹಲವು ಪಂದ್ಯಗಳು ಪುಣೆಗೆ ವರ್ಗಾವಣೆ ಮಾಡುವ ಹಂತ ತಲುಪಿತ್ತು.

ಹಾಗೆಯೇ ಕಾವೇರಿ ಗದ್ದಲದಿಂದ ತಮಿಳುನಾಡಿಗೆ ಕಾವೇರಿ ನೀರು ಬಿಡದ ಕಾರಣ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಕಪ್ಪು ಪಟ್ಟಿ‌ ಧರಿಸಿ‌ ಜಾಗೃತಿ‌ ಮೂಡಿಸುವಂತೆ ಹೇಳಲಾಗಿತ್ತು.

ಆದರೆ ನಮ್ಮ‌ ಕ್ಯಾಪ್ಟನ್ ಕೂಲ್ ಧೋನಿಯವರು ಈ ಹೇಳಿಕೆಯನ್ನು‌ ತಿರಸ್ಕರಿಸಿ ನಾವು ಇಲ್ಲಿ ಬಂದಿರುವುದು ಕ್ರಿಕೆಟ್ ಆಡುವುದಕ್ಕೆ ಇನ್ನೊಬ್ಬರ ವಿರುದ್ಧ ಹೋರಾಡುವುದಕ್ಕಲ್ಲ ಕನ್ನಡಿಗರು ಕೂಡ ಜನರೇ ಕನ್ನಡಿಗರೂ ಸಹ ಜನರೇ ನಾವು ಅವರ ಕಷ್ಟವನ್ನು ಅರಿತುಕೊಳ್ಳದೇ ಅವರ ವಿರುದ್ಧ ಕಪ್ಪು ಪಟ್ಟಿ ಧರಿಸಿ ಆಡುವುದು ಎಷ್ಟು ಸರಿ ಎಂದು ಹೇಳಿ ಕನ್ನಡಿಗರ ಪರ ಹೇಳಿಕೆಯನ್ನು‌ ನೀಡಿದ್ದಾರೆ.

ಈ ವಿಷಯ ತಿಳಿದು ತಮಿಳು ನಾಡಿನ‌ ಜನತೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕ್ರಿಕೆಟ್ ಆಡುವಾಗ ಸ್ಟೇಡಿಯಂ ಗೆ ನುಗ್ಗಲು ಯತ್ನಿಸಿ ಚೆನ್ನೈ ತಂಡದ ವಿರುದ್ಧ ಘೋಷಣೆ ಗಳನ್ನು ಸಹ ಕೂಗಿದರು. ಏನೇ ಆಗಲಿ ಮಹೇಂದ್ರ ಸಿಂಗ್ ಧೋನಿಯವರು ತಮ್ಮ ಈ ಹೇಳಿಕೆಯಿಂದ ಕನ್ನಡಿಗರ ಮನಗೆದ್ದಿದ್ದಾರೆ. ಹಾಗೂ ಕನ್ನಡದ ಪರ ಬ್ಯಾಟ್ ಬೀಸಿದ್ದಾರೆ.

Please follow and like us:
0
leave a comment

Leave a Reply

Your email address will not be published. Required fields are marked *

Devotional