ಸರಗಳ್ಳತನದ ಸಮಯದಲ್ಲಿ ಸಿಲುಕಿದರೆ ಮಾಡಬೇಕಾದ ಅತಿ ಮುಖ್ಯವಾದ 5 ಕೆಲಸಗಳು. ಶೇರ್ ಮಾಡಿ ಎಲ್ಲಾ ಹೆಣ್ಣು ಮಕ್ಕಳಿಗೂ ಉಪಯೋಗವಾಗಲಿ..

ಸರಗಳ್ಳತನದ ಸಮಯದಲ್ಲಿ ನಾವು ಸಿಲುಕಿದರೆ ಮಾಡಬೇಕಾದ ಅತಿ ಮುಖ್ಯವಾದ 5 ಕೆಲಸಗಳು..

ಇತ್ತೀಚೆಗಿನ ದಿನಗಳಲ್ಲಿ ಸರಗಳ್ಳತನ ಕಡಿಮೆಯಾದಂತೆ ಕಂಡರೂ ಅಲ್ಲಿ ಇಲ್ಲಿ ಸರ ಕಳ್ಳತನದ ಕೇಸ್ ಗಳು ದಾಖಲಾಗುತ್ತಲೇ ಬಂದಿದೆ.. ನಿಮಗೆ ನಮ್ಮ ಒಂದು ಸಲಹೆ ಏನೆಂದರೆ ಆಡಂಬರ ಪ್ರದರ್ಶನ ಬೇಡ..


ಮೈ ತುಂಬಾ ವಡವೆ ಹಾಕಿಕೊಂಡು ಅನಗತ್ಯ ಪ್ರದರ್ಶನಗಳಿಗೆ ಬ್ರೇಕ್ ಹಾಕಿ.. ಹೌದು ಮಹಿಳೆಯರಿಗೆ ಹಾಕಿಕೊಳ್ಳಬೇಕೆಂದೆನಿಸುವುದು ಆದರೆ ಹಾಕುವುದರಲ್ಲೂ ಮಿತಿ ಇರಲಿ.. ಎಷ್ಟು ಬೇಕೋ ಅಷ್ಟು ಮಾತ್ರ ಬಳಸಿ..
ಅಕಸ್ಮಾತ್ ಸರಗಳ್ಳತನದ ಸಂದರ್ಭದಲ್ಲಿ ನಾವು ಸಿಲುಕಿದರೆ ಈ ಕೆಳಗಿನಂತೆ ಮಾಡಿ..


1.ಕುತ್ತಿಗೆಗೆ ಕಳ್ಳ ಕೈ ಹಾಕಿದಾಗ..

ಕಳ್ಳ ನಿಮ್ಮ ಕುತ್ತಿಗೆಗೆ ಕೈ ಹಾಕಿದಾಗ ನೀವು ಸರವನ್ನು ಹಿಡಿದುಕೊಳ್ಳಬೇಡಿ.. ಬದಲಿಗೆ ಕಳ್ಳನ ಕೈ ಹಿಡಿದು ಎಳೆದರೆ ಸುಲಭವಾಗಿ ಅವನು ಬೈಕ್ ನಿಂದ ಕೆಳಗೆ ಬೀಳುವನು.. ಸರ ಹಿಡಿದರೆ ನಿಮ್ಮ ಕುತ್ತಿಗೆಗೆ ಹಾನಿಯಾಗುವುದು.. ಅಥವಾ ಸರಗಳ್ಳ ಬೈಕ್ ಚಲಾಯಿಸುವುದರಿಂದ ನಿಮ್ಮನ್ನು ಸರದ ಜೊತೆಯೇ ಎಳೆದುಕೊಂಡು ಹೋಗಬಹುದು.. ಎಚ್ಚರವಹಿಸಿ..

2.ಕೂಗಿಕೊಳ್ಳಿ..

ಕಿರುಚಿದರೆ ಅವಮಾನ ಎಂದು ಭಾವಿಸಬೇಡಿ.. ಕಷ್ಟದ ಸಮಯದಲ್ಲಿ ಕೂಗಿದಾಗ ಅಕ್ಕ ಪಕ್ಕದವರಿಗೆ ಸುಲಭವಾಗಿ ತಿಳಿದು ಹತ್ತಿರ ಬರುವರು.. ಕೂಗಿ ಕೊಳ್ಳುವುದರಿಂದ ಕಳ್ಳನು ಸ್ವಲ್ಪ ಭಯ ಬೀತನು ಕೂಡ ಆಗುವನು.. ಆಗ ನಿಮ್ಮ ಸರವನ್ನು ಬಿಟ್ಟು ತಪ್ಪಿಸಿಕೊಳ್ಳಲು ಎತ್ನಿಸಬಹುದು..

3. ನಂಬರ್ ನೋಟ್ ಮಾಡಿಕೊಳ್ಳಿ.

ಬೈಕ್ ಗಳಿಗೆ ಇರುವುದು ನಾಲ್ಕೆ ನಂಬರ್ ಮುಂಚಿತವಾಗಿ ಎರಡು ಅಕ್ಷರ ಅಷ್ಟೇ.. ಗಾಬರಿ ಇಂದ ನಾವು ಗಾಡಿ ನಂಬರ್ ನೋಟ್ ಮಾಡಿಕೊಳ್ಳುವುದಿಲ್ಲ.. ಇದೇ ನಾವು ಮಾಡುವ ತಪ್ಪು.. ಗಾಡಿ ನಂಬರ್ ಒಂದು ಇದ್ದರೇ ಪೋಲಿಸರು ಸುಲಭವಾಗಿ ಕಳ್ಳರನ್ನು ಪತ್ತೆ ಹಚ್ಚಲು ಸಹಾಯವಾಗುತ್ತದೆ.

4.ಮೊಬೈಲ್ ನಿಂದ ಫೋಟೋ ತೆಗೆದುಕೊಳ್ಳಿ..

ಸರ ಕದ್ದು ಸ್ವಲ್ಪ ದೂರ ಕಳ್ಳ ಹೋದರೂ ಪರವಾಗಿಲ್ಲ.. ಮೊಬೈಲ್ ನಿಂದ ಒಂದು ಫೋಟೋ ತೆಗೆದುಕೊಳ್ಳಿ.. ಸಿಸಿಟಿವಿ ಯಲ್ಲಿ ಬ್ಲರ್ ಆಗಿರುವ ಮುಖದ ಕಳ್ಳರನ್ನೇ ಕಂಡು ಹಿಡಿಯುವ ಪೋಲೀಸರು.. ಮೊಬೈಲ್ ನಲ್ಲಿ ಸೆರೆ ಸಿಕ್ಕವರನ್ನು ಬಿಡುವರೇ??

5.ತಕ್ಷಣ ಪೋಲೀಸರಿಗೆ ಖರೆ ಮಾಡಿ..

ಸರ ಕದ್ದಾಗ ಅಳುತ್ತಾ ಕೂರಬೇಡಿ.. ಬುದ್ಧಿವಂತರಾಗಿ ಯೋಚಿಸಿ.. ತಕ್ಷಣ ಪೋಲೀಸರಿಗೆ ಕಾಲ್ ಮಾಡಿ.. ಕಳ್ಳ ಹೋಗುತ್ತಿರುವ ಮಾರ್ಗವನ್ನು ತಿಳಿಸಿ.. ಸಾಧ್ಯವಾದರೆ ಕಳ್ಳ ಹಾಕಿರುವ ಬಟ್ಟೆಯ ಬಗ್ಗೆಯು ತಿಳಿಸಿ.. ತಕ್ಷಣ ಟ್ರೇಸ್ ಮಾಡಲು ಸುಲಭವಾಗುವುದು..

ಅರಿವು ಮೂಡಿಸುವ ಕೆಲಸ ನಮ್ಮದು.. ಕಾಳಜಿ ವಹಿಸಿ ಶೇರ್ ಮಾಡಿ ಮಾಹಿತಿ ಹಂಚುವ ಕೆಲಸ ನಿಮ್ಮದು.. ಶೇರ್ ಮಾಡಿ

Please follow and like us:
0
leave a comment

Leave a Reply

Your email address will not be published. Required fields are marked *

Devotional