ಹಿಂದೂ ಸಂಪ್ರದಾಯದ ಪ್ರಕಾರ ಒಣಕೊಬ್ಬರಿ ಯಾವುದಕ್ಕೆಲ್ಲಾ ಶ್ರೇಷ್ಠ?? ಇಲ್ಲಿದೆ ಮಾಹಿತಿ!

ಒಣ‌ಕೊಬ್ಬರಿ ಕೇವಲ‌ ಅಡುಗೆಗೆ ಮಾತ್ರವಲ್ಲದೆ, ನಮ್ಮ ಮನೆಯಲ್ಲಿ ನಡೆಯುವ‌ ಮಂಗಳ ಕಾರ್ಯದ ಜೊತೆಗೆ , ನಮ್ಮಲ್ಲಿರುವ ದೋಷಗಳನ್ನು ದೂರ ಮಾಡುತ್ತದೆ. ಇದರ ಉಪಯೋಗಗಳು ಹಲವು

ಅವುಗಳೆಂದರೆ:-

1. ಒಣ ಕೊಬ್ಬರಿಗೆ ಸಂಸ್ಕೃತದಲ್ಲಿ ನಾರಿಕೇಳ ಎಂದೂ, ಇದನ್ನು ದಾನ ಮಾಡಿದರೆ‌ ಮನೆಯಲ್ಲಿನ ದಾರಿದ್ರ್ಯ ನಾಶವಾಗುತ್ತದೆ.

2.‌ಒಣಕೊಬ್ಬರಿಯನ್ನು ತಾಂಬೂಲದ ಜೊತೆಗೆ ಕೆಂಪು ಅಥವಾ ಬಿಳಿ ಸಕ್ಕರೆಯೊಂದಿಗೆ ಗುರುಗಳಿಗೆ ದಾನ ಮಾಡಿದರೆ, ನಿಂತು ಹೋಗಿರುವ ಕಾರ್ಯಗಳು ನೆರವೇರುವುದು.

3.ಒಣಕೊಬ್ಬರಿಯನ್ನು ಕಡಲೆಹಿಟ್ಟಿನೊಂದಿಗೆ ಕುಲದೇವರಿಗೆ ನೈವೇದ್ಯ ಮಾಡಿ‌ ದಂಪತಿಗಳಿಗೆ ದಾನ ಮಾಡಿದರೆ, ಸ್ತ್ರೀ ದೋಷ, ಸ್ತ್ರೀ ಋಣ ಕಡಿಮೆಯಾಗುತ್ತದೆ.

 

 

 

4.ಒಣಕೊಬ್ಬರಿಯನ್ನು ಸಕ್ಕರೆಯೊಂದಿಗೆ‌ ಮಿಶ್ರ ಮಾಡಿ ಕೊಡುತ್ತಾರೆ ಇದರಿಂದ ಶುಭ ಕಾರ್ಯಗಳು ಯಾವುದೇ ‌ವಿಘ್ನವಿಲ್ಲದೇ, ನಿರ್ವಿಘ್ನವಾಗಿ ನೆರವೇರುವುದು.

5.‌ಸಕ್ಕರೆ ಮತ್ತು ಕೊಬ್ಬರಿ ಬೆರೆಸಿ ಕಡುಬು ಮಾಡಿ‌ ಮಹಾಗಣಪತಿಯ ಹೋಮಕ್ಕೆ‌ ಕೊಟ್ಟರೆ, ಇಷ್ಟಾರ್ಥಗಳು‌ ಕೈಗೂಡಿ, ಸಾಲಭಾದೆಯಿಂದ ಹೊರ
ಬರಬಹುದು.

6. ಕೊಬ್ಬರಿಯಿಂದ ಒಬ್ಬಟ್ಟನ್ನು ಮಾಡಿ ಕುಲದೇವರಿಗೆ ಮತ್ತು ಸ್ತ್ರೀ ದೇವಸ್ಥಾನ ದಲ್ಲಿ ನೈವೇದ್ಯ ಮಾಡಿ, ಸುಮಂಗಲಿಯರಿಗೆ, ಭಕ್ತಾದಿಗಳಿಗೆ ದಾನ ಮಾಡಿದರೆ ಕುಜದೋಷ‌ ನಿವಾರಣೆಯಾಗುವುದು.

 

7. ದುರ್ಗಾದೇವಿಗೆ ಅಷ್ಟೋತ್ತರ ಪೂಜೆ ಮಾಡಿಸಿ, ಕೊಬ್ಬರಿಯಿಂದ ಒಬ್ಬಟ್ಟು ತಯಾರಿಸಿ ನೈವೇದ್ಯ ಮಾಡಿದರೆ, ಕಾಳಸರ್ಪದೋಷವು ನಿವಾರಣೆ ಯಾಗುವುದು.

ಇಷ್ಟೆಲ್ಲಾ ಉಪಯೋಗವಿರುವ ಕೊಬ್ಬರಿಯನ್ನು‌ ಉಪಯೋಗಿಸಿಕೊಂಡು ನಮ್ಮ ದೋಷಗಳನ್ನು ಪರಿಹಾರ ‌ಮಾಡಿ ಕೊಳ್ಳೋಣ ಅಲ್ಲವೇ?

Please follow and like us:
0
leave a comment

Leave a Reply

Your email address will not be published. Required fields are marked *

Devotional